ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಪಲ್ಲಕ್ಕಿ’ ಬಸ್‌ ಸೇವೆಗೆ ಚಾಲನೆ

Published 20 ಜನವರಿ 2024, 5:38 IST
Last Updated 20 ಜನವರಿ 2024, 5:38 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ–ಲಾತೂರ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿರುವ ಪಲ್ಲಕ್ಕಿ (ನಾನ್‌ ಎಸಿ–ಸ್ಪೀಪರ್‌) ಬಸ್‌ ಸೇವೆಗೆ ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಪ್ರವಾಸಿ ಸ್ಥಳಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ಮಾರ್ಗದಲ್ಲಿ ಬಸ್‌ ಸೇವೆ ಆರಂಭಿಸಿದ್ದೇವೆ. ಹೊಸ ಬಸ್‌ ಸೇವೆಯಿಂದ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ನಿತ್ಯ ರಾತ್ರಿ 8ಕ್ಕೆ ಬೆಳಗಾವಿಯಿಂದ ಹೊರಡುವ ಬಸ್‌ ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳಜಾಪುರ ಮಾರ್ಗವಾಗಿ ಸಂಚರಿಸಿ, ಮಾರನೇ ದಿನ ಬೆಳಿಗ್ಗೆ 6.20ಕ್ಕೆ ಲಾತೂರ ತಲುಪಲಿದೆ. ಅಲ್ಲಿಂದ ಸಂಜೆ 7.30ಕ್ಕೆ ಹೊರಟು, ಬೆಳಿಗ್ಗೆ 5.30ಕ್ಕೆ ಬೆಳಗಾವಿ ತಲುಪಲಿದೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ₹10 ಲಕ್ಷ ಅಪಘಾತ ಪರಿಹಾರ ಸೌಲಭ್ಯವಿದೆ’ ಎಂದರು. ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT