ಬೆಳಗಾವಿ: ‘ಇಲ್ಲಿ ನಡೆಯುತ್ತಿರುವ ಸಿವಿಲ್ ಎಂಜಿನಿಯರ್‌ಗಳ 38ನೇ ರಾಷ್ಟ್ರೀಯ ಮಹಾ ಸಮಾವೇಶದಲ್ಲಿ ನಾವು ಪ್ರದರ್ಶಿಸಿದ ‘ಸ್ವಯಂಚಾಲಿತ ಸೂಕ್ಮ ಹನಿ ನೀರಾವರಿ ಪದ್ಧತಿ’ ಪ್ರಾತ್ಯಕ್ಷಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನೀರಾವರಿ ತಜ್ಞರು, ಸಾವಿರಾರು ಎಂಜಿನಿಯರ್‌ಗಳು ಇದನ್ನು ವೀಕ್ಷಿಸಿದ್ದಾರೆ’ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ(ವಾಲ್ಮಿ) ನಿರ್ದೇಶಕ ರಾಜೇಶ ಅಮ್ಮಿನಬಾವಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ನೀರಾವರಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಜತೆಗೆ, ಮಿತವಾಗಿ ಮತ್ತು ಸಮರ್ಪಕವಾಗಿ ನೀರು ಬಳಕೆಗೆ ಒತ್ತು ನೀಡುವ ದೃಷ್ಟಿಯಿಂದ ಈ ಪ್ರಾತ್ಯಕ್ಷಿಕೆ ರೂಪಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಈ ವ್ಯವಸ್ಥೆಯನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರ, ಸಿಂಗಟಾಲೂರ ಮತ್ತಿತರ ಹನಿ ನೀರಾವರಿ ಯೋಜನೆಗಳಲ್ಲಿ ಅನುಷ್ಠಾನಗೊಳಿಸಿದೆ’ ಎಂದರು.
‘ಸ್ವಯಂಚಾಲಿತ ಸೂಕ್ಮ ಹನಿ ನೀರಾವರಿ ಪದ್ಧತಿಯಡಿ ಘಟಕ ನಿರ್ಮಾಣಕ್ಕೆ ಸರ್ಕಾರ ಈಗ ಯಾವುದೇ ಸಬ್ಸಿಡಿ ಘೋಷಿಸಿಲ್ಲ. ಸ್ವಂತ ಖರ್ಚಿನಲ್ಲೇ ಅದನ್ನು ನಿರ್ಮಿಸಿಕೊಳ್ಳಬೇಕಿದೆ. ಇದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುವುದರಿಂದ ರೈತರು ಸಾಮುದಾಯಿಕವಾಗಿ ಕನಿಷ್ಠ 500 ಎಕರೆಯಲ್ಲಿ ಈ ಘಟಕ ನಿರ್ಮಿಸಬಹುದು’ ಎಂದು ಸಲಹೆ ನೀಡಿದರು.
ಪ್ರಭಾಕರ ಹಾದಿಮನಿ, ಶೈಲಜಾ ಹೊಸಮಠ, ಭೀಮಾ ನಾಯಕ, ಬಸವರಾಜ ಪೂಜಾರ, ಮಹಾದೇವ ಗೌಡರ, ಶ್ರೀಪಾದ ಜೋಶಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.