ಗುರುವಾರ , ಡಿಸೆಂಬರ್ 8, 2022
18 °C
ಹುಕ್ಕೇರಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ: ನಟ ಧನಂಜಯ್ ಹೇಳಿಕೆ

ನಾಡು– ನುಡಿ ಉಳಿವಿಗೆ ಕಂಕಣಬದ್ಧರಾಗಿ: ನಟ ಧನಂಜಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ಕನ್ನಡ ನಾಡು ನುಡಿ ಉಳಿಸಲು ಕನ್ನಡಿಗರೆಲ್ಲರೂ ಕಂಕಣಬದ್ಧರಾಗಬೇಕು. ಕನ್ನಡ ಉಳಿವಿಗಾಗಿ ಹಗಲಿರಳು ಶ್ರಮಿಸಬೇಕು. ಕನ್ನಡ ಭಾಷೆಗೆ ಜೀವ ನೀಡಲು ಪ್ರಾಣವನ್ನು ತೆರಲು ಸಿದ್ಧರಾಗೋಣ ಎಂದು ಚಿತ್ರನಟ ಡಾಲಿ ಧನಂಜಯ್ ಹೇಳಿದರು.

ಅವರು ಪಟ್ಟಣದ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ, ಕರುನಾಡು ವಿಜಯ ಸೇನೆ ಮತ್ತು ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ರಾಜ್ಯೋತ್ಸವ ಒಂದು ದಿನ ಆಚರಿಸಿದರೆ ಸಾಲದು. ಗಡಿನಾಡಿನಲ್ಲಿ ಕನ್ನಡ ಉಳಿವಿಗಾಗಿ ಎಲ್ಲರ ಪಣ ತೋಡಬೇಕಾಗಿದೆ. ಪಟ್ಟಣ ಗಡಿಭಾಗಕ್ಕೆ ಸಮೀವಿಪದ್ದರೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ರಾಜ್ಯೋತ್ಸವ ಆಚರಿಸುತ್ತಿರುವುದು ಖುಷಿಯಾಗಿದೆ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಾಡು ನುಡಿಯ ತಾಯಿ ಭುವನೇಶ್ವರಿಯ ಅದ್ಧೂರಿ ಜಾತ್ರೆ ಇದು ಎಂದರು. ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಕನ್ನಡವು ಮನ ಮನೆಗಳಿಂದ ಬೆಳಗಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಸಂಕೇಶ್ವರ ಹಿರಾ ಶುಗರ್ಸ್ ಅಧ್ಯಕ್ಷ ನಿಖಿಲ ಕತ್ತಿ ಮಾತನಾಡಿ, ನಾವು ಗಡಿಭಾಗದಲ್ಲಿದ್ದರೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಹಬ್ಬವನ್ನು ಆಚರಿಸುತ್ತಿರುವುದು ಸಂತಸವಾಗಿದೆ. ಕನ್ನಡ ಭಾಷೆ ಪೂಜಿಸೋಣ ಜತೆಗೆ ಇತರ ಭಾಷೆಯನ್ನು ಗೌರವಿಸೋಣ ಎಂದರು.

ಭಾವಚಿತ್ರಕ್ಕೆ ಪೂಜೆ: ಹುಕ್ಕೇರಿ ಗ್ರಾಮೀನ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಅಡವಿಸಿದ್ದೇಶ್ವರ ಮಠದ ಮುಂದೆ ನಾಡದೇವಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ರೂಪಕಗಳ ಮೆರವಣಿಗೆಗೆ ಚಾಲನೆ ನೀಡಿದರು.

ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮತ್ತು ಪಟ್ಟಣದ ಸಹಸ್ರಾರು ಯುವ ಸಮೂಹ ರಾಜ್ಯೋತ್ಸವ ಸಂಗವಾಗಿ ಪಟ್ಟಣಕ್ಕೆ ಅಗಮಿಸಿತ್ತು. ಈ ಸಂದರ್ಭದಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಲೇಜಿಮ್, ಝಾಂಜಪಥಕ, ವೇಷಧಾರಿ ಸೇರಿದಂತೆ ವಿವಿಧ ರೂಪಕಗಳೊಂದಿಗೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದ್ಯಸರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಸದಾಶಿವ ಕರೆಪ್ಪಗೋಳ, ಭೀಮಶಿ ಗೋರಖನಾಥ, ಉತ್ಸವ ಸಮಿತಿ ಸದಸ್ಯರಾದ ಸುಹಾಸ್ ನೂಲಿ, ಅಪ್ಪುಸ್ ತುಬಚಿ, ಪ್ರಜ್ವಲ್ ನಿಲಜಗಿ, ಗವೀಶ್ ರವದಿ, ಚನ್ನಪ್ಪ ಗಜಬರ, ಪುರಸಭೆ ಸದಸ್ಯರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಕನ್ನಡಪರ ಸಂಘಟನೆಗಳ ಪಧಾದಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.0

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು