ಸೋಮವಾರ, ಆಗಸ್ಟ್ 15, 2022
21 °C

ರಾಜಕಾರಣದಲ್ಲಿ ಯಾವ ಶಾಪವೂ ತಗಲುವುದಿಲ್ಲ: ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಮೇಶ್ ಜಾರಕಿಹೊಳಿ

ಬೆಳಗಾವಿ: ‘ರಾಜಕಾರಣದಲ್ಲಿ ಯಾವ ಶಾಪವೂ ತಗಲುವುದಿಲ್ಲ’.

– ‘ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ’ ಎಂಬ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿಕೆಗೆ  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು ಹೀಗೆ.

‘ಮಿತ್ರ ಮಂಡಳಿಯ ನಾವಷ್ಟೇ ಅಲ್ಲ ಬಿಜೆಪಿಯ ಎಲ್ಲ ಶಾಸಕರೂ ವಿಶ್ವನಾಥ್‌ ಜೊತೆಗಿದ್ದೇವೆ. ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಈಗಾಗಲೇ ನಾನು ಬೆಂಗಳೂರು ಹಾಗೂ ದೆಹಲಿಯ ವಕೀಲರೊಂದಿಗೆ ಚರ್ಚಿಸಿದ್ದೇನೆ’ ಎಂದರು.

‘17 ಶಾಸಕರಿಗೆ ವಿಪ್ ಅನ್ವಯಿಸುವುದಿಲ್ಲ. ಅಧಿವೇಶನದಲ್ಲಿ ಪಾಲ್ಗೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಅವರಿಗೆ ಒತ್ತಡ ಹಾಕಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆದೇಶ ನೀಡಿದ್ದರು. ಅದನ್ನೇ ಇಟ್ಟುಕೊಂಡು ಚಾಲೆಂಜ್ ಮಾಡುತ್ತೇವೆ. ಆಗ, ಹೈಕೋರ್ಟ್ ಆದೇಶ ತಾನಾಗಿಯೇ ಬಿದ್ದು ಹೋಗುತ್ತದೆ’ ಎಂದರು.

‘ವಿಶ್ವನಾಥ್‌ ಅಥವಾ ಸಿ.ಪಿ. ಯೋಗೀಶ್ವರ್‌ಗೆ ಮಂತ್ರಿ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಬಿಟ್ಟಿದ್ದು. ಆದರೆ, ವಿಶ್ವನಾಥ್‌ ಜೊತೆ  ನಾವೆಲ್ಲರೂ ಇರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು