ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಯೋಜನೆ ಮನೆ ಮನೆಗೆ ತಿಳಿಸಿ: ಜಗದೀಶ್ ಶೆಟ್ಟರ್‌

Published 31 ಮಾರ್ಚ್ 2024, 14:15 IST
Last Updated 31 ಮಾರ್ಚ್ 2024, 14:15 IST
ಅಕ್ಷರ ಗಾತ್ರ

ಯರಗಟ್ಟಿ: ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ, ಜನಸಾಮನ್ಯರಿಗೆ ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಿದ್ದು, ಯೋಜನೆಗಳನ್ನು ಜನರ ಮನೆ ಮನೆಗೆ ತಿಳಿಸಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್‌ ಹೇಳಿದರು.

ಪಟ್ಟಣದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಅವರ ವಾಡೆ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಕಾರ್ಯಕರ್ತರ ಜೊತೆ ಮಾತನಾಡಿದರು.

ನರೇಂದ್ರ ಮೋದಿ ಅವರನ್ನು ಮತ್ತಮ್ಮೆ ಪ್ರಧಾನಿ ಮಾಡಲು ಮತದಾರರ ಮನವೊಲಿಸಬೇಕು. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಯ ನಮ್ಮದೆ ಎಂದು ತಿಳಿಸಿದರು.

ಸವದತ್ತಿ ಬಿಜೆಪಿ ಮುಖಂಡ ವಿರಪಾಕ್ಷ ಮಾಮನಿ ರತ್ನಾ ಮಾಮನಿ, ಜೆಡಿಎಸ್ ಸವದತ್ತಿ ಮುಖಂಡ ಸೌರಭ ಚೋಪ್ರಾ ಮಾತನಾಡಿದರು.

ಡಾ. ಕೆ.ವಿ ಪಾಟೀಲ, ವಿನಯಕುಮಾರ ದೇಸಾಯಿ, ಅಜಿತಕುಮಾರ ದೇಸಾಯಿ, ಮಹಾಂತೇಶ ಜಕಾತಿ,
ಈರಣ್ಣ ಚಂದ್ರಗಿ, ವಿಠ್ಠಲಗೌಡ ದೇವರಡ್ಡಿ, ಬಸನಗೌಡ ಪಾಟೀಲ, ಸದಾನಂದ ಪಾಟೀಲ, ವಿಶಾಲಗೌಡ ಪಾಟೀಲ, ಇಮಾಮಸಾಬ ಹುಸೆನಾಯ್ಕರ, ಶಿವಾನಂದ ಪಟ್ಟಣಶೇಟ್ಟಿ, ದಾವಲಸಾಬ ಚಪ್ಟಿ, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT