ಗುರುವಾರ , ನವೆಂಬರ್ 21, 2019
21 °C
road accident

ಅಪಘಾತ: ಬೆಳಗಾವಿ ಜಿಲ್ಲೆಯ ಆರು ಮಂದಿ ಸಾವು

Published:
Updated:

ಸಂಕೇಶ್ವರ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಸಾತಾರಾದಲ್ಲಿ ಗುರುವಾರ ಬೆಳಗಿನ ಜಾವ ಲಾರಿ ಹಾಗೂ ಖಾಸಗಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಆರು ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.

ಮುಂಬೈನಿಂದ ಬೆಳಗಾವಿಗೆ ಹೊರಟ್ಟಿದ್ದ ಬಸ್‌, ಸಾತಾರಾದ ಪೆಟ್ರೋಲ್‌ ಬಂಕ್‌ ಬಳಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಾಗ ಬಸ್‌ನಲ್ಲಿದ್ದವರು ಮೃತಪಟ್ಟಿದ್ದಾರೆ.

ಸಂಕೇಶ್ವರದ ವೈದ್ಯ ಸಚಿನ್‌ ಪಾಟೀಲ, ವರ್ತಕ ವಿಶ್ವನಾಥ ಗಡ್ಡಿ, ಬೆಳಗಾವಿಯ ಅಬ್ಬಾಸ ಕಟಗಿ, ರವೀಂದ್ರ ಕರಿಗಾರ, ಅಶೋಕ ಜುನಗಾರೆ ಹಾಗೂ ಗುಂಡು ತುಕಾರಾಮ ಗಾವಡೆ ಮೃತರು. ಗಾಯಗೊಂಡವರಲ್ಲಿ ಸಂಕೇಶ್ವರದ ವರ್ತಕ ಬಸವರಾಜ ಬಾಗಲಕೋಟೆ ಅವರೂ ಸೇರಿದ್ದಾರೆ. ಸಾತಾರಾದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿಕ್ರಿಯಿಸಿ (+)