ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಗವಾಡ: ಮದ್ಯಪಾನ ಮಾಡುತ್ತ ವಾಹನ ಚಲಾಯಿಸಿದ ಆರ್‌ಟಿಓ ಚಾಲಕ

Published 20 ಜೂನ್ 2024, 15:37 IST
Last Updated 20 ಜೂನ್ 2024, 15:37 IST
ಅಕ್ಷರ ಗಾತ್ರ

ಕಾಗವಾಡ: ತಾಲ್ಲೂಕಿನ ಶೇಡಬಾಳ ಪಟ್ಟಣದಲ್ಲಿ ಇತ್ತೀಚಿಗೆ ಅಥಣಿ ಆರ್‌ಟಿಒ ಇಲಾಖೆಯ ಅಧಿಕಾರಿಗಳ ವಾಹನದ ಚಾಲಕ ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್ ಅವರ ಉಪಸ್ಥಿತಿಯಲ್ಲಿ ಮದ್ಯಸೇವನೆ ಮಾಡುತ್ತ ವಾಹನ ಚಾಲನೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆರ್‌ಟಿಓ ಇನ್‌ಸ್ಪೆಕ್ಟರ್‌ ಅವರ ಮುಂದೆಯೇ ಇಂತಹ ಘಟನೆ ನಡೆದಿರುವುದಕ್ಕೆ ಸಾರ್ವಜನಿಕರಿದ ಆಕ್ರೋಶ ವ್ಯಕ್ತವಾಗಿದೆ. ಸಾರಿಗೆ ನಿಯಮ ಪಾಲನೆ ಮಾಡುವ ಇಲಾಖೆಯ ಅಧಿಕಾರಿಗಳೇ ಈ ರೀತಿ ನಿಯಮ ಉಲ್ಲಂಘನೆ ಮಾಡಿರುವುದು ಎಷ್ಟು ಸರಿ? ಎಂದು ಜನರು ಆಕ್ಷೇಪಿಸಿದ್ದಾರೆ.

ಮದ್ಯ ಸೇವನೆ ಮಾಡಿದ್ದ ಚಾಲಕ ಕೆಆರ್‌ಎಸ್ ಕಾರ್ಯಕರ್ತರ ಕೈಗೆ ಸಿಕ್ಕಿಹಾಕಿಕೊಂಡಿದ್ದು ತಾನು, ಮದ್ಯಪಾನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT