ಮಂಗಳವಾರ, ಮಾರ್ಚ್ 28, 2023
34 °C

ವಿಟಿಯು ಕುಲಪತಿಯಾಗಿ ಪ್ರೊ.ವಿದ್ಯಾಶಂಕರ್‌ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೂತನ ಕುಲಪತಿಯಾಗಿ ಪ್ರೊ.ಎಸ್‌.ವಿದ್ಯಾಶಂಕರ್‌ ಅವರನ್ನು ಗುರುವಾರ ನೇಮಕ ಮಾಡಿ, ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

2016ರಲ್ಲಿ ವಿಟಿಯು ಕುಲಪತಿಯಾಗಿ ನೇಮಕವಾಗಿದ್ದ ಪ್ರೊ.ಕರಿಸಿದ್ಧಪ್ಪ ಅವರನ್ನೇ, ಎರಡನೇ ಅವಧಿಗೂ ಮುಂದುವರಿಸಲಾಗಿತ್ತು. ಸೆ. 23ಕ್ಕೆ ಅವರ ಅವಧಿ ಕೊನೆಗೊಂಡಿದ್ದರಿಂದ, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ನೂತನ ಕುಲಪತಿ ನೇಮಕ ಮಾಡಿದ್ದಾರೆ.

ಪ್ರೊ.ವಿದ್ಯಾಶಂಕರ್‌ ಅವರು ಇದಕ್ಕೂ ಮುನ್ನ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು