ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ಬೈನಾಕವಾಡಿ ವರೆಗಿನ ರಸ್ತೆ ಸುಧಾರಣೆಯ ₹ 1.57 ಕೋಟಿ ವೆಚ್ಚದ ಕಾಮಗಾರಿಗೆ ಸದಲಗಾ ಪುರಸಭೆ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ‘ಸದಲಗಾ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರೀಯ ವಿದ್ಯಾಲಯವನ್ನು ಈಚೆಗೆ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪಾಲಕರ ಹಾಗೂ ಮಕ್ಕಳ ಓಡಾಟಕ್ಕೆ ಉತ್ತಮ ರಸ್ತೆ ಅವಶ್ಯಕತೆ ಇತ್ತು. ನೂತನ ರಸ್ತೆಯು ಶಿಕ್ಷಣ ಹಾಗೂ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.

ಶಾಸಕ ಗಣೇಶ ಹುಕ್ಕೇರಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ವಿದ್ಯಾಲಯ ನಿರ್ಮಾಣ ಮಾಡಲಾಗಿತ್ತಾದರೂ ಶಾಲೆಗೆ ಹೋಗಲು ಸಮರ್ಪಕವಾದ ರಸ್ತೆ ಇರಲಿಲ್ಲ. ಶಾಲೆ ಸ್ಥಳಾಂತರವೂ ಆಗಿರಲಿಲ್ಲ. ಈ ಕುರಿತು ಜೂನ್ 16ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಅರುಣ ದೇಸಾಯಿ, ಪುರಸಭೆ ಸದಸ್ಯರಾದ ಸತೀಶ ಪಾಟೀಲ, ರವಿ ಗೋಸಾವಿ, ಉದಯ ಪಾಟೀಲ, ಸುಭಾಷ ಕುರುಬೇಟ, ಆನಂದ ತಾರದಾಳೆ, ದಿಲೀಪ ಅನೂರೆ, ಅಪ್ಪಾಸಾಹೇಬ ಸಿಂಗಾಡೆ, ಪೋಪಟ ಕಾಂಬಳೆ, ವಸಂತ ಖೋತ, ರಾಹುಲ ಸೂರ್ಯವಂಶಿ, ಅಮರ ಮಧಾಳೆ, ಅಮಿತ ಮಾಳಿ, ಎಂಜಿನಿಯರ್ ಬಿ.ಡಿ. ನಾಯಕವಾಡಿ, ಜಿ.ಎಸ್. ಕಾಮಕರ, ರೋಹನ ಕೋಠಿವಾಲೆ ಇದ್ದರು.

‘ಪ್ರಜಾವಾಣಿ ವರದಿ ಪರಿಣಾಮವಾಗಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.