ಬುಧವಾರ, ಜನವರಿ 19, 2022
28 °C

ನೋಡಿ: ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸ್ವಾಮೀಜಿಯೊಬ್ಬರು ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಘಟನೆ ಗೋಕಾಕ ತಾಲ್ಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿದೆ.

ಸಂಗನಬಸವ ಸ್ವಾಮೀಜಿ (53) ಮೃತರು. ಬಸವಯೋಗ ಮಂಟಪ ಟ್ರಸ್ಟ್‌ನ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದ ಅವರು, ನ.6ರಂದು ಸಂಜೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದರು. ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮುಖಂಡರು ಮತ್ತು ಭಕ್ತರ ಎದುರಿನಲ್ಲೇ ಅವರು ಸಾವಿಗೀಡಾದ ದೃಶ್ಯ ಭಕ್ತರೊಬ್ಬರ ಮೊಬೈಲ್‌ ಫೋನ್‌ನಲ್ಲಿ ಸೆರೆಯಾಗಿದೆ.  ಅದು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು