ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸವದತ್ತಿ | ಗುಂಡಿಗೆ ಉರುಳಿದ ಬಸ್: 6 ಮಂದಿಗೆ ಗಂಭೀರ ಗಾಯ

Published 13 ಮೇ 2024, 15:52 IST
Last Updated 13 ಮೇ 2024, 15:52 IST
ಅಕ್ಷರ ಗಾತ್ರ

ಸವದತ್ತಿ: ಪಟ್ಟಣದ ಹೊರವಲಯದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಸವದತ್ತಿ–ಧಾರವಾಡ ರಾಜ್ಯ ಹೆದ್ದಾರಿ ಬದಿಯ ಗುಂಡಿಗೆ ಸಾರಿಗೆ ಸಂಸ್ಥೆ ಬಸ್ ಸೋಮವಾರ ಬೆಳಗಿನ ಜಾವ ಉರುಳಿದ ಪರಿಣಾಮ 6 ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಮೊಗ್ಗದ ಶ್ರೀದೇವಿ ಕಾಳೆ(35), ಉಡುಪಿಯ ಅರುಣ ಬೆನ್ನಾಡಿ (30), ಗೋಕಾಕದ ಮಹಮ್ಮದ್‌ ಮುಲ್ಲಾ (40), ಸಂತೋಷ ಹುಂಡಿಕರ(46), ಗೋಪಾಲ ಮಿರಜಕರ (49), ರಾಯಬಾಗದ ಭಾಗವ್ವ ದಾನ್ಸಿ(38) ಗಾಯಗೊಂಡವರು. ಅವರನ್ನು ಚಿಕಿತ್ಸೆಗಾಗಿ ಧಾರವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 20 ಪ್ರಯಾಣಿಕರಿಗೆ ಸಣ್ಣ–ಪುಟ್ಟ ಗಾಯವಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
‘ಅಥಣಿ ಘಟಕಕ್ಕೆ ಸೇರಿದ ಬಸ್‌ ದಾವಣಗೆರೆ-ಸವದತ್ತಿ-ಅಥಣಿ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಗುಂಡಿಗೆ ಉರುಳಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವದತ್ತಿ ಹೊರವಲಯದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಸವದತ್ತಿ–ಧಾರವಾಡ ರಾಜ್ಯ ಹೆದ್ದಾರಿ ಬದಿಯ ಗುಂಡಿಗೆ ಸಾರಿಗೆ ಸಂಸ್ಥೆ ಬಸ್ ಉರುಳಿರುವುದು
ಸವದತ್ತಿ ಹೊರವಲಯದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಸವದತ್ತಿ–ಧಾರವಾಡ ರಾಜ್ಯ ಹೆದ್ದಾರಿ ಬದಿಯ ಗುಂಡಿಗೆ ಸಾರಿಗೆ ಸಂಸ್ಥೆ ಬಸ್ ಉರುಳಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT