ಭಾನುವಾರ, ಆಗಸ್ಟ್ 9, 2020
23 °C

ಸವದತ್ತಿ: ತುಪ್ಪರಿಹಳ್ಳದ ಪರ್ಯಾಯ ರಸ್ತೆಗೂ ಆತಂಕ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವದತ್ತಿ: ಸವದತ್ತಿ-ಧಾರವಾಡ ರಸ್ತೆಯ ಇನಾಮಹೊಂಗಲದ ಬಳಿ ತುಪರಿಹಳ್ಳಕ್ಕೆ ನಿರ್ಮಿಸಿದ್ದ ಪರ್ಯಾಯ ರಸ್ತೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ.

ಕಳೆದ ತಿಂಗಳು ಸುರಿದಿದ್ದ ಮಳೆಗೆ ಇನಾಮಹೊಂಗಲದ ಸೇತುವೆ ಮುರಿದಿತ್ತು. ಸೇತುವೆ ಕೆಳಗೆ ಸಂಚಾರಕ್ಕಾಗಿ ಪರ್ಯಾಯ ರಸ್ತೆ ನಿರ್ಮಿಸಲಾಗಿತ್ತು. ಈಗ ಅದೂ ತುಪ್ಪರಿಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಪ್ಪರಿಹಳ್ಳದ ಹರಿವು ಹೆಚ್ಚಾಗಿದ್ದು, ಸದ್ಯ ಸಂಚಾರ ಸ್ಥಗಿತಗೊಂಡಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಎಚ್‌.ಎ ಕದ್ರಾಪೂರ ಪ್ರತಿಕ್ರಿಯಿಸಿ, ನೀರಿನ ಹರಿವು ಹೆಚ್ಚಿರುವುದರಿಂದ ಪರ್ಯಾಯ ರಸ್ತೆ ತಡೆಯುವ ಲಕ್ಷಣಗಳಿಲ್ಲ ಎಂದರು.

ಸೇತುವೆ ದುರಸ್ತಿಗೆ ₹3.5 ಕೋಟಿ ಅಗತ್ಯವಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು