ಶನಿವಾರ, ಜನವರಿ 18, 2020
22 °C

ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಇಲ್ಲಿನ ಮೋಟಗಿ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆಬಿದ್ದಿತು.

ಸಮಾರೋಪ ಸಮಾರಂಭದಲ್ಲಿ ಲಿಂ.ಚನ್ನಬಸವ ಶಿವಯೋಗಿಗಳ 96ನೇ ಸ್ಮರಣೋತ್ಸವ ನಡೆಯಿತು. ಭಾವೈಕ್ಯ ಬೆಳದಿಂಗಳ ಕಾರ್ಯಕ್ರಮದ ಬಳಿಕ 6 ಜನ ಸಾಧಕರನ್ನು ಸತ್ಕರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಇಲ್ಲಿನ ಗಚ್ಚಿನಮಠ ಶಿವಬಸವ ಸ್ವಾಮೀಜಿ, ‘ಬಸವಾದಿ ಶರಣದ ವಚನಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಕೊಂಡರೆ ವಿಶ್ವದಲ್ಲಿನ ಎಲ್ಲ ಸಮಸ್ಯೆಗಳೂ ದೂರವಾಗುತ್ತವೆ. ಶರಣರ ವಚನಗಳು ವಿಶ್ವ ಶಾಂತಿಗೆ ಟಾನಿಕ್ ಇದ್ದಂತೆ. ಜಾತಿ, ವರ್ಣರಹಿತ ಸಮಾಜ ನಿರ್ಮಾಣ ಮಾಡಲು, ಸ್ತ್ರೀ ಸ್ವಾತಂತ್ರ್ಯಕ್ಕೆ ಮಹತ್ವ ನೀಡಿದ ಕಾಯಕ ತತ್ವಕ್ಕೆ ಮಹತ್ವ ನೀಡಿ ಆರ್ಥಿಕ ಸಮಾನತೆ ತಂದ ಕೀರ್ತಿ ಶರಣರಿಗೆ ಸಲ್ಲುತ್ತದೆ’ ಎಂದರು.

ವಿವಿಧ ಕ್ಷೇತ್ರದ ಸಾಧನೆಗಾಗಿ ಎ.ಸಿ. ದೇಸಾಯಿ. ಡಾ.ಎ.ಎ. ಪಾಂಗಿ, ಆನಂದ ಹಂಜಿ, ರಾಜೇಂದ್ರ ದೇಸಾಯಿ, ಶಶೀಧರ ಘೀವಾರಿ, ರಾಜಶೇಖರ ಮೆಣಸಿನಕಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಮುಕ್ತಾಯಿ ಮಹಾವೈಭವ’ ನಾಟಕ ಪ್ರದರ್ಶನ ನಡೆಯಿತು.‌ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು