ಸಂಕೇಶ್ವರ: ನಾಗರ ಪಂಚಮಿ ಬಂದಿತೆಂದರೆ ಹೆಣ್ಣು ಮಕ್ಕಳು ತವರು ಮನೆಗೆ ಬರುವುದು, ಮಣ್ಣಿನ ನಾಗಪ್ಪನ ಪೂಜೆ ಮಾಡುವುದು, ಹಾವುಗಳ ಹುತ್ತಿಗೆ ಹಾಲು ಹಾಕಿ ಬರುವುದು, ಬಗೆ-ಬಗೆಯ ಉಂಡಿ ತಿಂದು ಜೋಕಾಲಿ ಆಡುವುದು ಸಂಪ್ರದಾಯ. ಆದರೆ ಗಡಿ ಭಾಗದ ನಿವಾಸಿ ಮೆಹಬೂಬ ಹಮೀದ ಸನದಿ ಅವರು ಜೀವಂತ ಹಾವು ಹಿಡಿದು ಸುರಕ್ಷಿತ ತಾಣಕ್ಕೆ ಬಿಟ್ಟುಬರುವುದು ವಿಶೇಷವಾಗಿದೆ.

ಸಂಕೇಶ್ವರ ಹತ್ತಿರದ ನಿಲಜಿ ಗ್ರಾಮದ ಮೆಹಬೂಬ ಹಮೀದ ಸನದಿ ಅವರು, 19ನೇ ವಯಸ್ಸಿನಿಂದಲೇ ಹಾವುಗಳನ್ನು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಸಧ್ಯ 49 ವಯಸ್ಸಿನ ಸನದಿ ಅವರು ಇದುವರೆಗೂ ಬೆಳಗಾವಿ, ಕೊಲ್ಲಾಪೂರ, ರತ್ನಾಗಿರಿ ಜಿಲ್ಲೆಗಳಲ್ಲಿ 30 ಸಾವಿರ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತ ತಾಣಕ್ಕೆ ಬಿಟ್ಟು ಬಂದಿದ್ದಾರೆ. ಅವರು ಹೇಳುವ ಪ್ರಕಾರ, ಹಾವುಗಳಲ್ಲಿ 46 ಜಾತಿಗಳಿದ್ದು ಅದರಲ್ಲಿ ನಾಗ, ಮನಿಯಾರ, ಗೌನಸ ಹಾಗೂ ಪುರಸೆಗಳು ಮಾತ್ರ ವಿಷಾರಿ ಹಾವುಗಳಾಗಿವೆ. ಉಳಿದವು ಸಾಮಾನ್ಯ ಹಾವುಗಳಾಗಿದ್ದು ಪರಿಸರ ಸ್ನೇಹಿಗಳಾಗಿವೆ.

ಹಾವುಗಳ ಕುರಿತು ಜನರು ಭಯ ಪಟ್ಟು ಅವುಗಳನ್ನು ಕೊಲ್ಲಲು ಹೋಗಬಾರದು. ಅವು ಮಾನವರಂತೆ
ಜೀವಿಗಳಾಗಿವೆ ಎನ್ನುತ್ತಾರೆ ಮೆಹಬೂಬ. ಹಾವುಗಳ ಕುರಿತು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು, ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ಇದುವರೆಗೂ 1000 ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ. ಅದಕ್ಕಾಗಿ ವನ್ಯಜೀವಿ ಸಂರಕ್ಷಣೆ ಮತ್ತು ಸೌಂವರ್ದನಾ ಸಂಘವನ್ನು ರಚಿಸಿದ್ದಾರೆ. ಹಾವು ಕಚ್ಚಿದರೂ ಭಯ ಪಡಬೇಕಾದ ಅಗತ್ಯವಿಲ್ಲ. ಹಾವು ಕಡಿತದ ಜಾಗದಿಂದ ರಕ್ತ ಮೇಲೆರದಂತೆ ಅಲ್ಲಿ ಬಿಗಿಯಾದ ಬಟ್ಟೆ ಕಟ್ಟಿ ನಂತರ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದರೆ ಹಾವು ಕಡಿತದ ಗಾಯ ಕಡಿಮೆಯಾಗುತ್ತದೆ ಎನ್ನುತ್ತಾರೆ.

ಹಾವುಗಳನ್ನು ಕಂಡರೆ ತಮಗೆ ತಿಳಿಸಿ. ಅವುಗಳನ್ನು ಹಿಡಿದು ಅರಣ್ಯ ಹೋಗಿ ಬಿಟ್ಟು ಬರುತ್ತೆವೆ ಎನ್ನುತ್ತಾರೆ ಮೆಹಬೂಬ ಅವರು.

ಶಾಲಾ ಕಾಲೇಜುಗಳಲ್ಲಿ ಅವರು ಮಾಡಿದ ಜನ ಜಾಗೃತಿ ಕಾರ್ಯಕ್ರಮದ ಪರಿಣಾಮವೆನೆಂದರೆ, ಖನದಾಳ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೇವು ಕೋಯ್ಯುವಾಗ ಹಾವನ್ನೆ ಕತ್ತರಿಸಿದ್ದರು. ಆಗ ಆ ಹಾವು ಸಿಟ್ಟಿಗೆದ್ದು ಆ ಮಹಿಳೆಯ ಕೈಗೆ ಕಚ್ಚಿತು. ಆಗ ಅಲ್ಲಿಯೆ ಸನಿಹದಲ್ಲಿದ್ದ ಶಾಲೆಗೆ ಹೋಗುತ್ತಿದ್ದ ಅವರ ಪುತ್ರಿ (ಹಾವುಗಳ ಜಾಗ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಕೆ) ತನ್ನ ರಿಬ್ಬನನ್ನು ತೆಗೆದು ತಾಯಿಯ ಕೈಗೆ ಬಿಗಿಯಾಗಿ ಕಟ್ಟಿ ಹಾವಿನ ವಿಷ ಮೇಲೆರದಂತೆ ಮಾಡಿದಳು. ನಂತರ ಸಂಕೇಶ್ವರ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದಾಗ ಆಗ ಬದುಕಿ ಉಳಿದರು. ಅವರನಾಳ ಗ್ರಾಮದಲ್ಲಿ ನಾಗರ ಹಾವೊಂದು ಮಗು ಮಲಗಿದ್ದ ತೊಟ್ಟಿಲು ಮೇಲೆ ಹೆಡೆ ತೆಗೆದು ನರ್ತಿಸುತ್ತಿರುವಾಗ ಅದನ್ನು ಹಿಡಿದು ಅರಣ್ಯ ಬಿಟ್ಟು ಬಂದ ಘಟನೆ ಸದಾ ನೆನಪಿನಲ್ಲಿ ಉಳಿಯುವಂಥದ್ದು ಎಂದು ಮೆಹಬೂಬ ನೆನಪಿಸುತ್ತಾರೆ.

ಮೆಹಬೂಬ ಸನದಿ ಅವರ ಸಂಪರ್ಕ ಸಂಖ್ಯೆ- 9270444499.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.