ಜೊಹಾನಸ್‌ಬರ್ಗ್: ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಮಾರ್ಕೊ ಜೆನ್ಸೆನ್ ಅವರ ಅಮೋಘ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು ತತ್ತರಿಸಿತು.
ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ಪಂದ್ಯದಲ್ಲಿ 122 ರನ್‌ಗಳಿಂದ ಗೆದ್ದ ಆತಿಥೇಯ ದಕ್ಷಿಣ ಆಫ್ರಿಕಾ 3–2ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.
ಮಾರ್ಕೊ ಜೆನ್ಸೆನ್ ಐದು ವಿಕೆಟ್ ಗಳಿಸಿ ತಂಡದ ಬೃಹತ್ ಜಯಕ್ಕೆ ಕಾರಣರಾದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಏಳು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಏಡನ್ ಮಾರ್ಕರ್ (93; 87ಎ, 4X9, 6X3) ಹಾಗೂ ಡೇವಿಡ್ ಮಿಲ್ಲರ್ (63; 65ಎ, 4X4, 6X3) ಅವರ ಆಟದಿಂದ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 315 ರನ್ ಗಳಿಸಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ ಮಾರ್ಕೊ 23 ಎಸೆತಗಳಲ್ಲಿ 47 ರನ್ ಗಳಿಸಿದರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದರು.
ಅವರ ನಿಖರ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು 34.1 ಓವರ್‌ಗಳಲ್ಲಿ 193 ರನ್ ಗಳಿಸಿತು. ಆರಂಭಿಕ ಬ್ಯಾಟರ್ 56 ಎಸೆತಗಳಲ್ಲಿ 71 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 315 (ಕ್ವಿಂಟನ್ ಡಿಕಾಕ್ 27, ವ್ಯಾನ್ ಡರ್ ಡಸೆನ್ 30, ಏಡನ್ ಮರ್ಕರಂ 93, ಡೇವಿಡ್ ಮಿಲ್ಲರ್ 63, ಮಾರ್ಕೊ ಜೆನ್ಸೆನ್ 47, ಪಿಶುವಾಯೊ ಔಟಾಗದೆ 39, ಸೀನ್ ಅಬಾಟ್ 54ಕ್ಕೆ2, ಆ್ಯಡಂ ಜಂಪಾ 71ಕ್ಕೆ3) ಆಸ್ಟ್ರೇಲಿಯಾ: 34.1 ಓವರ್‌ಗಳಲ್ಲಿ 193 (ಮಿಚೆಲ್ ಮಾರ್ಷ್ 71, ಮಾರ್ನಸ್ ಲಾಬುಷೇನ್ 44, ಸೀನ್ ಅಬಾಟ್ 23, ಮಾರ್ಕೊ ಜೆನ್ಸೆನ್ 39ಕ್ಕೆ5, ಕೇಶವ್ ಮಹಾರಾಜ್ 33ಕ್ಕೆ4) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 122 ರನ್ ಜಯ ಹಾಗೂ 3–2ರಿಂದ ಸರಣಿ ಗೆಲುವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.