ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ವಿಎಸ್‌ಎಮ್ ಸಂಸ್ಥೆಯ ಚೇರ್ಮನ್‌ ಚಂದ್ರಕಾಂತ ಕೋಠಿವಾಲೆ
Last Updated 26 ಏಪ್ರಿಲ್ 2022, 6:21 IST
ಅಕ್ಷರ ಗಾತ್ರ

ನಿಪ್ಪಾಣಿ: ಇನ್ಫೊಸಿಸ್, ಟಿಸಿಎಸ್, ವಿಪ್ರೋ, ಕ್ಯಾಪ್‌ಜೆಮಿನಿ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ನಮ್ಮ ವಿಎಸ್‌ಎಮ್ ಸಂಸ್ಥೆಯ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 46 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಚೇರ್ಮನ್‌ ಚಂದ್ರಕಾತ ಕೋಠಿವಾಲೆ ಹೇಳಿದರು.

ಸ್ಥಳೀಯ ವಿಎಸ್‌ಎಮ್ ಸಂಸ್ಥೆಯ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಪದವಿ ಮುಗಿದ ನಂತರ ನಮ್ಮ ವಿದ್ಯಾರ್ಥಿಗಳು ಕೈಯಲ್ಲಿ ಪ್ರಮಾಣಪತ್ರಗಳು ಹಿಡಿದು ಅಲ್ಲಲ್ಲಿ ಉದ್ಯೋಗವಕಾಶಕ್ಕಾಗಿ ಅಲೆದಾಡ ಬಾರದು ಎಂಬ ಉದ್ದೇಶದಿಂದ ಅನೇಕ ಪ್ರತಿಷ್ಠಿತ ಕಂಪನಿಗಳು ನಮ್ಮ ಮಹಾವಿದ್ಯಾಲಯಕ್ಕೆ ಬರುವಂತೆ ಮಾಡಲಾಗಿದೆ. ಅದರಂತೆ ಮೆಕ್ಯಾನಿಕಲ್ ವಿಭಾಗದ ಇರ್ಷಾದ ಮಕಾನದಾರ, ರುತುಜಾ ನವಾಳೆ, ಇ ಮತ್ತು ಸಿ ವಿಭಾಗದ ಓಂಕಾರ ಮುತಾಲಿಕ, ಸಿಎಸ್ ವಿಭಾಗದ ಪದ್ಮಭೂಷಣ ಅಡದಾಂಡೆ ಮತ್ತು ವೈಭವ ಪಾಟೀಲ ಇನ್ಫೊಸಿಸ್‌ಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಪದ್ಮಭೂಷಣ ಅಡದಾಂಡೆ ವಿದ್ಯಾರ್ಥಿ ಏಕಕಾಲದಲ್ಲಿ 5 ಕಂಪನಿಗಳಲ್ಲಿ ಆಯ್ಕೆಗೊಂಡಿದ್ದು ಹಾಗೂ ಅತ್ಯಧಿಕ ವರಮಾನದೊಂದಿಗೆ ರಾಹುಲ ನಸಲಾಪೂರೆ ಟಿಸಿಎಸ್ ನಲ್ಲಿ ಆಯ್ಕೆಯಾಗಿದ್ದು ವಿಶೇಷವಾಗಿದೆ ಎಂದರು.

ಪ್ರಾಚಾರ್ಯ ಡಾ. ಉಮೇಶ ಪಾಟೀಲ ಮಾತನಾಡಿ, ಶೇ100 ರಷ್ಟು ಉದ್ಯೋಗವಕಾಶ ನೀಡಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಸುಮಾರು ಶೇ 50 ರಷ್ಟು ಗುರಿಯನ್ನು ಮುಟ್ಟಲಾಗಿದೆ. ಪ್ಲೇಸ್‌ಮೆಂಟ್ ಅಧಿಕಾರಿ ಡಾ. ಸುನೀಲ ಸಂಗೊಳ್ಳಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಸಂಜಯ ಮೊಳವಾಡೆ, ಸಿ.ಇ.ಓ. ಡಾ. ಸಿದ್ದಗೌಡ ಪಾಟೀಲ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT