ಹುಕ್ಕೇರಿ: ‘ಸ್ಪರ್ಧಾತ್ಮಕ ಯುಗದಲ್ಲಿ ಅಸ್ತಿತ್ವ ಸಾಧಿಸಲು ಕೇವಲ ಅಂಕ ಸಾಕಾಗುವುದಿಲ್ಲ. ಆತ್ಮಸ್ಥೈರ್ಯ, ನೈತಿಕತೆ, ಶಿಸ್ತಿನ ಜೀವನದ ಜತೆ ಸ್ಪರ್ಧೆಗೆ ಸಿದ್ಧವಾಗಬೇಕು’ ಎಂದು ನಿವೃತ್ತ ಪ್ರಾಚಾರ್ಯ ಶಂಕರ ತೇರದಾಳ ಹೇಳಿದರು.

ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸಂಕಲ್ಪ -2025 ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ್ವರ ವಿದ್ಯಾ ಟ್ರಸ್ಟ್ ಉಪಾಧ್ಯಕ್ಷ ಸುಚೀತ ಕತ್ತಿ ಮಾತನಾಡಿ, ವಿದ್ಯಾರ್ಥಿಗಳು ಬುದ್ದಿವಂತಿಕೆ ಹಾಗೂ ಕೌಶಲ ಹೆಚ್ಚಿಸಿಕೊಳ್ಳಬೇಕು’ ಎಂದರು.

ಐಕ್ಯೂಎಸಿ ಸಂಯೋಜನಾಧಿಕಾರಿ ಯು.ಕೆ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

2023-25ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪ್ರಶಸ್ತಿ ಮತ್ತು ಕ್ರೀಡಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಆರ್.ಎಸ್.ಹುದ್ದಾರ ವಿದ್ಯಾರ್ಥಿಗಳಿಗೆ ದೀಪದಾನ ಮತ್ತು ಪ್ರಮಾಣ ವಚನ ಬೋಧಿಸಿದರು.

ಟ್ರಸ್ಟ್ನ ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ, ಪ್ರಾಚಾರ್ಯ ವಿ.ಎಸ್.ಹೂಗಾರ, ಪಿಯು ವಿಭಾಗದ ಎಸ್.ಎಂ.ಭಂಗಿ, ನರ್ಸಿಂಗ್ ವಿಭಾಗದ ವಿ.ಬಿ.ಕಮತೆ, ಯು.ಕೆ.ಪಾಟೀಲ, ಪ್ರೊ.ಎಸ್.ಎಸ್.ಹಟ್ಟಿ, ಜೆ.ಎ. ಹೊಸಮನಿ., ಬಿ.ಎ.ಮಿರ್ಜಿ ಸೇರಿದಂತೆ ಬೋಧಕ ವರ್ಗ, ನೂರಾರು ವಿದ್ಯಾರ್ಥಿಗಳು ಇದ್ದರು.

ಪ್ರೊ.ಆರ್.ಕೆ.ಪಾಟೀಲ್ ಸ್ವಾಗತಿದರು. ವಿದ್ಯಾರ್ಥಿನಿಯರಾದ ಸೀಮಾ ಮತ್ತು ಪೂಜಾ ನಿರೂಪಿಸಿದರು. ಶೈಲಾ ಪೂಜೇರ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.