ಅಥಣಿ: ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು, ರೈತ ಮಹಿಳೆಯರು, ಕನ್ನಡಪರ ಹೋರಾಟಗಾರರು, ರಸ್ತೆಯಲ್ಲಿ ಉರುಳು ಸೇವೆ ನಡೆಸಿದರು.

ನಂತರ ಶಿವಯೋಗಿ ವೃತ್ತದಿಂದ ವೀರರಾಣಿ ಚನ್ನಮ್ಮ ವೃತ್ತದವರೆಗೆ ಅರೆ ಬೆತ್ತಲೆಯಾಗಿ ಕಬ್ಬಿನ ಹೊರೆ ಮತ್ತು ಜೋಳದ ರೊಟ್ಟಿ ಬುತ್ತಿ ತಲೆ ಮೇಲೆ ಹೊತ್ತುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ಸಕ್ಕರೆ ದರ ಕಡಿಮೆ ಇದ್ದಾಗ ಹೆಚ್ಚಿನ ಬೆಲೆ ನೀಡಿರುವ ಕಾರ್ಖಾನೆಯ ಮಾಲೀಕರು ಈಗ ಸಕ್ಕರೆ ದರ ಹೆಚ್ಚಾಗಿದ್ದು ₹3500 ಕೊಡಬೇಕು’ ಎಂದರು.

ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ ಮಾತನಾಡಿ, ‘ಸರ್ಕಾರ ಮೊoಡುತನ ಬಿಟ್ಟು, ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ತಿಳಿಸಿದರು.

ರೈತ ಮುಖಂಡರಾದ ರಾಮನಗೌಡ ಪಾಟೀಲ, ಜಗನ್ನಾಥ ಬಾಮನಿ, ಉದಯ ಮಾಕಾಣಿ, ಮುರಿಗೆಪ್ಪ ಹೊನವಾಡ, ಮಹಾದೇವ ಕುಚನೂರ, ಸಂಗಪ್ಪ ಕರಿಗಾರ, ಮಹದೇವ ಹೋನಮನೆ ಸೇರಿದಂತೆ ಅನೇಕ ರೈತ ಮುಖಂಡರು, ರೈತ ಮಹಿಳೆಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.