ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಮಧುಮೇಹ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ

Published:
Updated:

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ವಿಶ್ವ ತಾಯಿಂದಿರ ದಿನಚರಣೆ ಅಂಗವಾಗಿ ಮೇ 15ರಂದು ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ಮಧುಮೇಹ ಮಕ್ಕಳಿಗೆ 19ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರ ಆಯೋಜಿಸಿದೆ.

ಕೇಂದ್ರದ ಡಾ.ಸುಜಾತಾ ಜಾಲಿ ನೇತೃತ್ವದ ತಂಡ ನಡೆಸಿಕೊಡಲಿದೆ. ರಕ್ತ, ಮಸ್ಕಲರ ಸ್ಕೆಲ್‌ಟಲ್ ತಪಾಸಣೆ, ಆಟ, ಚಿತ್ರಕಲೆ, ಪೇಂಟಿಂಗ್‌ ಸ್ಪರ್ಧೆ ಹಾಗೂ ಪ್ರೇರಣಾದಾಯಕ ಕಾರ್ಯಚಟುವಟಿಕೆಗಳನ್ನು ನಡೆಸಲಾಗುವುದು. ಅತ್ಯುತ್ತಮ ಎನಿಸಿಕೊಂಡ ಬಾಲಕಿ ಮತ್ತು ಬಾಲಕನಿಗೆ ಹಾಗೂ ಒಬ್ಬ ತಾಯಿಗೆ ಪದಕ ನೀಡಿ ಗೌರವಿಸಲಾಗುವುದು.

ಮಧುಮೇಹ ಟೈಪ್-1ರಿಂದ ಬಳಲುತ್ತಿರುವ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಅಸ್ಟ್ರೇಲಿಯಾದ ಅಂತರರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದ ಸಹಕಾರದಿಂದ ಇನ್ಸುಲಿನ್, ಗ್ಲುಕೊಮೀಟರ್‌ ಸೇರಿದಂತೆ ವಿವಿಧ ವೈದ್ಯಕೀಯ ಸಲಕರಣೆ, ರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದಿಂದ ವಿದ್ಯಾರ್ಥಿವೇತನ ನೀಡಲಾಗುವುದು. 260 ಮಕ್ಕಳು ಭಾಗವಹಿಸಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9844073591 ಸಂ‍ಪರ್ಕಿಸಬಹುದು.

Post Comments (+)