ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆವಲಪ್‌ಮೆಂಟ್‌ ಪೆನಲ್‌ಗೆ ಜಯ

Last Updated 30 ನವೆಂಬರ್ 2020, 16:01 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಬಿಸಿಸಿಐ) ಆಡಳಿತ ಮಂಡಳಿಗೆ ಕೈಗಾರಿಕೆ ಹಾಗೂ ವ್ಯಾಪಾರ ವಿಭಾಗದಿಂದ ಸೋಮವಾರ ಚುನಾವಣೆ ನಡೆಯಿತು. ‌ಎರಡೂ ವಿಭಾಗದಲ್ಲಿ ಡೆವಲಪ್‌ಮೆಂಟ್‌ ಪೆನಲ್‌ ಜಯ ಗಳಿಸಿದೆ.

ಟ್ರೇಡಿಂಗ್ ವಿಭಾಗದಿಂದ 5 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದರು. 504 ಜನರು ಮತ ಚಲಾಯಿಸಿದ್ದರು. ಅವರ ಪೈಕಿ ಹೇಮೇಂದ್ರ ಪೋರವಾಲ (343), ರಾಜೇಂದ್ರ ಮುತಗೇಕರ (300), ಸಂಜಯ ಪೋತದಾರ (367), ಸಂತೋಷ ಕಲಘಟಗಿ (300) ಮತ್ತು ವಿಕ್ರಮ್ ಜೈನ್ (275) ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸುಧೀರ್ ಚೌಗಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೈಗಾರಿಕೆ ಕ್ಷೇತ್ರದಿಂದ ಮೂರು ಸ್ಥಾನಗಳಿಗೆ ನಾಲ್ವರು ಸ್ಪರ್ಧಿಸಿದ್ದರು. 220 ಜನರು ಮತ ಚಲಾಯಿಸಿದ್ದರು. ರೋಹನ್ ಜುವಳಿ (216), ಪ್ರಭಾಕರ ನಾಗರಮುನ್ನೋಳಿ (211) ಮತ್ತು ಆನಂದ ದೇಸಾಯಿ (208) ಆಯ್ಕೆಯಾದರು. ಸತೀಶ್ ಕುಲಕರ್ಣಿ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT