ಹುಕ್ಕೇರಿ: ‘ಸ್ವಾತಂತ್ರ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯವರ ಕೊಡುಗೆ ಅಪಾರವಾಗಿದೆ’ ಎಂದು ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್. ಎಂ .ಗಂಗಾಧರಯ್ಯ ಹೇಳಿದರು.
ತಾಲ್ಲೂಕಿನ ಪಾಶ್ಚಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಣಿ ಚನ್ನಮ್ಮ ಅಧ್ಯಯನ ಪೀಠ ಮತ್ತು ಕನ್ನಡ ಕಲ್ಪವೃಕ್ಷ ಸಂಘ, ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ನಡೆದ 2023–24ನೇ ಸಾಲಿನ ವಿಶೇಷ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ‘ತ್ರಿಪದಿಗಳಲ್ಲಿ ರಾಣಿ ಚನ್ನಮ್ಮಳ ಇತಿವೃತ್ತಗಳು’ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಸುರೇಶ್ ಹನಗಂಡಿ ಮಾತನಾಡಿ, ‘ತ್ರಿಪದಿಗಳು ಜಾನಪದ ಜೀವನಾಡಿಗಳಾಗಿದ್ದು, ಗ್ರಾಮೀಣ ತ್ರಿಪದಿಗಳಲ್ಲಿ ಚನ್ನಮ್ಮಾಜಿಯ ಇತಿಹಾಸವೇ ಅಡಗಿದೆ’ ಎಂದರು.
ಪ್ರಾಚಾರ್ಯ ಆನಂದ ಎನ್.ಮಾತನಾಡಿ, ‘ಕಿತ್ತೂರು ಚನ್ನಮ್ಮ ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾಳೆ’ ಎಂದು ಹೇಳಿದರು.
ವಿವಿಧ ವಿಭಾಗದ ಅಧ್ಯಾಪಕ ವರ್ಗ, ಭೋದಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ವಿಭಾಗ ಮುಖ್ಯಸ್ಥೆ ಆಶಾ ರೆಡ್ಡಿ ಸ್ವಾಗತಿಸಿದರು, ಪ್ರೊ.ನೀಲಕಂಠ ಭೂಮಣ್ಣವರ ಪರಿಚಯಿಸಿದರು, ಪ್ರೊ ಸಂತೋಷ್ ಉಂಡಾಡಿ ನಿರೂಪಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಶೈಲ ಬಬಲಾದ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.