ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದತ್ತ ತಿರುಗಿ ನೋಡುತ್ತಿರುವ ವಿಶ್ವ: ಮಹಾಂತಪ್ರಭು ಸ್ವಾಮೀಜಿ

Published 13 ಜನವರಿ 2024, 16:08 IST
Last Updated 13 ಜನವರಿ 2024, 16:08 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಇಡೀ ವಿಶ್ವ ಭಾರತ ದೇಶವನ್ನು ಗುರುವಿನ ಸ್ಥಾನದಲ್ಲಿ ನೋಡುತ್ತಿದೆ. ಈ ಹಿಂದೆ ಭಾರತವನ್ನು ಹಾವಾಡಿಗರ ದೇಶವೆಂದು ಕರೆಯುತ್ತಿದ್ದರು. ಆದರೆ ಈಗ ಭಾರತ ಪ್ರಗತಿ ಪಥದತ್ತ ಸಾಗುತ್ತಿರುವ ಭಾರತ, ಬದಲಾವಣೆಯಾಗುತ್ತಿರುವ ಭಾರತವೆಂದು ಕರೆಯಲಾಗುತ್ತಿದೆ’ ಎಂದು ಶೇಗುಣಸಿಯ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ 65ನೇಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶನಿವಾರ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‍ಎಂಎಸ್‍ಆರ್‍ಕೆಐಟಿ)ದ ಕನ್ವೇನ್ಶನ್ ಹಾಲ್‍ನಲ್ಲಿ ಆಯೋಜಿಸಿದ್ದ ಮ್ಯಾರಾಥಾನ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ವಿದ್ಯಾ ಸಂವರ್ಧಕ ಮಂಡಳದ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಉನ್ನತ ಸಾಧನೆಗಳನ್ನು ಮಾಡುತ್ತ ತಾವು ಕಲಿತ ವಿದ್ಯಾ ಸಂಸ್ಥೆಯೊಂದಿಗೆ ನಾಡಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕು. ಭಾರತ ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಮಂಡಳದ ಚೇರಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆಯವರು ಈ ಸಂಸ್ಥೆಗೆ ಒಂದು ಕಾಯಕಲ್ಪ ಒದಗಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ’ ಎಂದರು.

ಸುನೀಲ ಆಪಟೆಕರ ಮಾತನಾಡಿದರು. ಬೆಳಿಗ್ಗೆ ಮಂಡಳದ ಹಳೆಯ ಆವರಣದಿಂದ ಆರಂಭಗೊಂಡ ಸುಮಾರು 5.5 ಕಿ.ಮೀ. ಅಂತರದ ‘ವಿಎಸ್‍ಎಂ ಪ್ರೈಡ್ – ಮ್ಯಾರಾಥಾನ್’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಯುವವರ್ಗ, ವೃದ್ಧರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಪುರುಷರ ವಿಭಾಗದಲ್ಲಿ ಖಾನಾಪುರದ ಕಿರಣ ಸಂಗಾತಿ (ಪ್ರಥಮ), ಬೇಡಕಿಹಾಳದ ಅಜೀತ ಹಿರೆಕುರುಬರ (ದ್ವಿತೀಯ), ವಿನಾಯಕ ಬೆಳಗಾವೆ (ತೃತೀಯ), ಮಹಿಳೆಯರ ವಿಭಾಗದಲ್ಲಿ ವೈಷ್ಣವಿ ರಾವಳ (ಪ್ರಥಮ), ಶ್ರೇಯಾ ಡಾಂಬರೆ (ದ್ವಿತೀಯ), ಸೋನಾಲಿ ಪೇಡಣೆಕರ (ತೃತೀಯ), 57 ವರ್ಷದ ಸುನೀಲ ಹರಿದಾಸ ಮತ್ತು 7ನೇಯ ತರಗತಿಯ ಅಮರ ಗುರವ ಅವರಿಗೆ ಬಹುಮಾನ, ಪ್ರಮಾಣ ಪತ್ರ, ಟ್ರಾಫಿ ವಿತರಿಸಿ ಸನ್ಮಾನಿಸಲಾಯಿತು.

ಚಂದ್ರಕಾಂತ ಕೋಠೀವಾಲೆ, ಉಪಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಚಂದ್ರಕಾಂತ ತಾರಳೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ಅವಿನಾಶ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀನ ಪಾಟೀಲ, ಗಣೇಶ ಖಡೇದ, ಪ್ರಾಚಾರ್ಯ ಡಾ. ಉಮೇಶ ಪಾಟೀಲ, ಸಂಜಯ ಶಿಂತ್ರೆ, ರುದ್ರಕುಮಾರ ಕೋಠಿವಾಲೆ, ವಿನಾಯಕ ಪಾಟೀಲ, ಸಂತೋಷ ಕೋಠಿವಾಲೆ, ರಾಹುಲ ಕೋಠಿವಾಲೆ, ರೋಹನ ಕೋಠಿವಾಲೆ ಇದ್ದರು. ಸಿಇಒ ಡಾ.ಸಿದ್ಧಗೌಡ ಪಾಟೀಲ ಸ್ವಾಗತಿಸಿದರು. ಪ್ರೊ.ಕವಿತಾ ವಸೇದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT