ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ವಿವಿಧ ಕಂಪನಿಗಳಿಂದ ವಂಚನೆ: ಜೈಲ್‌ ಭರೋ ಚಳವಳಿ ನಡೆಸಿದ ಸಂತ್ರಸ್ತರು

Published : 1 ಅಕ್ಟೋಬರ್ 2024, 12:25 IST
Last Updated : 1 ಅಕ್ಟೋಬರ್ 2024, 12:25 IST
ಫಾಲೋ ಮಾಡಿ
Comments

ಬೆಳಗಾವಿ: ವಿವಿಧ ಕಂಪನಿಗಳಲ್ಲಿ ನಾವು ಹೂಡಿದ ಹಣ ಮರುಪಾವತಿಸಲು, ಅನಿಯಮಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019ರ ಅನ್ವಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಜೈಲ್‌ ಭರೋ ಚಳವಳಿ ನಡೆಸಿದ ವಂಚನೆ ಸಂತ್ರಸ್ತರ ಠೇವಣಿದಾರರ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದರು.

ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಕಾರರು, ಜಿಲ್ಲಾಧಿಕಾರಿ ಕಚೇರಿಯಿಂದ ರಾಣಿ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ಮಾಡಿದರು.

ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ‌ ವ್ಯಕ್ತಪಡಿಸಿದರು. ‘ನಮಗೆ ಹಣ ವಾಪಸ್‌ ಕೊಡಿ. ಇಲ್ಲವೆ ಜೈಲಿಗೆ ಕಳುಹಿಸಿ’ ಎಂದು ಘೋಷಣೆ ಕೂಗಿದರು.

‘ಪಿಎಸಿಎಲ್, ಗರಿಮಾ, ಅಗ್ನಿಗೋಲ್ಡ್, ಸಮೃದ್ಧಿ ಜೀವನ, ಸಾಯಿಪ್ರಸಾದ ಮತ್ತಿತರ ಕಂಪನಿಗಳಲ್ಲಿ ಠೇವಣಿ ಇರಿಸಿದ್ದೇವೆ. ಆದರೆ, ನಮಗೆ ಹಣ ಮರುಪಾವತಿಸದೆ ಕಂಪನಿಯವರು ವಂಚಿಸಿದ್ದಾರೆ. ಆ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಬೇಕು. ವಂಚನೆ ಮಾಡಿದವರಿಗೆ ಗಲ್ಲುಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆ ಕಾವು ಅರಿತ ಪೊಲೀಸರು, ಹೋರಾಟಗಾರರನ್ನು ವಶಕ್ಕೆ ಪಡೆದರು. ಮುಖಂಡರಾದ ಎಂ.ಎಂ.ಕುದಾವಂದನವರ, ಅಶೋಕ ಪಾರಶೆಟ್ಟಿ, ರವಿ ಬೆನ್ನೂರ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT