ಶನಿವಾರ, ಜನವರಿ 28, 2023
20 °C

ಕಾರು- ಬೈಕುಗಳ ಮಧ್ಯೆ ಡಿಕ್ಕಿ: ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಟಿಳಕವಾಡಿಯ ರೈಲ್ವೆ ಮೂರನೇ ಗೇಟಿನ ರಸ್ತೆ  ಮೇಲ್ಸೇತುವೆಯಲ್ಲಿ ಗುರುವಾರ ಕಾರ್ ಹಾಗೂ ಎರಡು ಬೈಕುಗಳ ಮಧ್ಯೆ ಮುಖಿಮುಖಿ ಡಿಕ್ಕಿ ಸಂಭವಿಸಿ ಮೂವರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೆಳಗಾವಿ ಕಡೆಯಿಂದ ಗೋವಾ ಕಡೆಗೆ ಹೊರಟಿದ್ದ ಕಾರ್ ಎದುರಿನಿಂದ ಬರುತ್ತಿದ್ದ ಎರಡು ಬೈಕುಗಳಿಗೆ ಗುದ್ದಿತು. ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಪುಟಿದು, ರಸ್ತೆ ತಡೆಯ ಮೇಲಿಂದ ಹಾರಿ 15 ಅಡಿ ಅಂತರದಿಂದ ಕೆಳಗೆ ಬಿದ್ದರು. ಕಾರ್ ಕೂಡ ರಸ್ತೆ ಪಕ್ಕದ ತಡೆಗೋಡೆ ಏರಿ ಓರೆಯಾಗಿ ನಿಂತಿತು. ಇನ್ನೊಂದು ಬೈಕ್ ಕಾರಿನಡಿ ಸಿಲುಕಿತು.

ಸೇತುವೆ ಮೇಲಿಂದ ಕೆಳಗೆ ಬಿದ್ದ ಬೈಕ್ ಸವಾರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರು. ಇತರ ವಾಹನ ಸವಾರರೇ ಮುಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಸ್ಥಳಕ್ಕೆ ಬಂದ ಪೊಲೀಸರು ಸೇತುವೆ ಸಂಚಾರ ಬಂದ್ ಮಾಡಿ ವಾಹನಗಳನ್ನು ತೆರವುಗೊಳಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು