ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕಾರದಗಾ– ಭೋಜ ಗ್ರಾಮಗಳ ಮಧ್ಯೆ ಹೆದ್ದಾರಿಯಲ್ಲಿ ಶುಕ್ರವಾರ ಕಬ್ಬು ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಪ್ಪಾಣಿ ತಾಲ್ಲೂಕು ಹುನ್ನರಗಿ ಗ್ರಾಮದ ಸಂತೋಷ ಶ್ರೀಕಾಂತ ಲಠ್ಠೆ (40) ಸಾವನ್ನಪ್ಪಿದವರು. ಎರಡು ಟ್ರಾಲಿಗಳನ್ನು ಹೊಂದಿದ ಟ್ರ್ಯಾಕ್ಟರ್‌ನಲ್ಲಿ ಅತಿ ಹೆಚ್ಚು ಕಬ್ಬು ಹೇರಿಕೊಂಡು ಹೊರಟಿದ್ದರು. ಜವಾಹರಲಾಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದರು.
ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿಬಿತ್ತು. ಚಾಲಕ ಅದರಡಿ ಸಿಲುಕಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.