ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾಧ್ವಜ ಹಾರಿಸಲು ಯತ್ನ: ಐವರು ಎಂಇಎಸ್ ಕಾರ್ಯಕರ್ತೆಯರು ವಶಕ್ಕೆ

Last Updated 8 ಮಾರ್ಚ್ 2021, 10:04 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಎದುರು ಭಗವಾ ಧ್ವಜ ಹಾರಿಸಲು ಸೋಮವಾರ ಯತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಐವರು ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.

ಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸಿರುವುದನ್ನು ವಿರೋಧಿಸಿ, ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲೇ ಐವರು ಕಾರ್ಯಕರ್ತೆಯರು ಭಗವಾಧ್ವಜವಿದ್ದ ಕಂಬದೊಂದಿಗೆ ಪಾಲಿಕೆ ಮುಂಭಾಗಕ್ಕೆ ತೆರಳಲು ಯತ್ನಿಸಿದರು.ಅವರನ್ನು ಮಾರ್ಗ ಮಧ್ಯೆದಲ್ಲೇ ಪೊಲೀಸರು ತಡೆದಿದ್ದರಿಂದ, ಭಗವಾ ಧ್ವಜ ಹಾರಿಸಬೇಕೆಂಬ ಆ ಕಾರ್ಯಕರ್ತೆಯರ ಯತ್ನ ವಿಫಲವಾಯಿತು.

ಘೋಷಣೆ ಕೂಗುತ್ತಾ ಪಾಲ್ಗೊಂಡಿದ್ದ ಮಾಜಿ ಮೇಯರ್‌ ಸರಿತಾ ಪಾಟೀಲ, ರೇಣು ಕಿಲ್ಲೇಕರ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ಅವರು ಮಾತಿನ ಚಕಮಕಿ ನಡೆಸಿದರು. ‘ಪಾಲಿಕೆ ಎದುರು ಹಾಕಿರುವ ಕನ್ನಡ ಧ್ವಜ ತೆರವುಗೊಳಿಸಬೇಕು. ಇಲ್ಲವೇ ನಮಗೂ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

ಮುಂಜಾಗ್ರತಾ ಕ್ರಮವಾಗಿ ನಗರಪಾಲಿಕೆ ಆವರಣ ಸೇರಿದಂತೆ ನಗರದಾದ್ಯಂತ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮಹಾರಾಷ್ಟ್ರದ ಶಿವಸೇನಾ ಮುಖಂಡ ವಿಜಯದ ದೇವಣೆ ಹಾಗೂ ಸಂಗಡಿಗರಿಗೆ ಜಿಲ್ಲಾ ಗಡಿ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT