ಶನಿವಾರ, ಜುಲೈ 2, 2022
22 °C

ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಮಕನಮರಡಿ: ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಮಣಗುತ್ತಿ ಕ್ರಾಸ್‌ ಸಮೀಪ ಬಂಧಿಸಿದ್ದಾರೆ.

ಲಾರಿ ಚಾಲಕ ಮಹಾರಾಷ್ಟ್ರದ ಕೊಲ್ಲಾಪೂರ ರಾಧಾನಗರದ ನಿವಾಸಿ ಅಲ್ಲಾಭಕ್ಷ ಮುಸೇನಾ ಮುಜಾವರ (66) ಹಾಗೂ ವ್ಯಾಪಾರಿ ಬೆಳಗಾವಿಯ ವೀರಭದ್ರನಗರದ ಅಹಮ್ಮದ ಬಸೀರ ಅಹಮ್ಮದ ತಾರವಾಲೆ (33) ಬಂಧಿತರು. ₹ 1.79 ಲಕ್ಷ ಮೌಲ್ಯದ 12 ಟನ್ ಅಕ್ಕಿ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್‌ಸ್ಪೆಕ್ಟರ್ ವಿರೇಶ ದೊಡ್ಡಮನಿ, ನಾಗನಗೌಡಾ ಕಟ್ಟಿಮನಿ, ಆರ್.ಎ.ಶಿಂಧೆ, ಎಲ್.ವೈ. ಕಿಲ್ಲಾರಗಿ, ಎನ್.ಆರ್.ಗಡ್ಡೆಪ್ಪನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು