ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಯುಪಿಐ ಟಿಕೆಟ್‌: ₹1.62 ಕೋಟಿ ಸಂಗ್ರಹ

Published 12 ಮಾರ್ಚ್ 2024, 15:46 IST
Last Updated 12 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 4,000 ಬಸ್ಸುಗಳಲ್ಲಿ ಯುಪಿಐ ಪಾವತಿಯ ಮೂಲಕ ಟಿಕೆಟ್ ವಿತರಣಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮಾರ್ಚ್‌ 3ರಿಂದ 11ರವರೆಗೆ ಒಟ್ಟು 1.70 ಲಕ್ಷ ವಹಿವಾಟು ನಡೆದಿದ್ದು, ₹1.62 ಕೋಟಿ ಮೊತ್ತ ಸಂಗ್ರಹವಾಗಿದೆ.

ಚಿಕ್ಕೋಡಿ, ಹುಬ್ಬಳ್ಳಿ (ಗ್ರಾ) ಹಾಗೂ ಬಾಗಲಕೋಟೆ ವಿಭಾಗಗಳು ಅನುಕ್ರಮವಾಗಿ ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡುತ್ತಿವೆ. ಗೋಕಾಕ, ಹುಬ್ಬಳ್ಳಿ ಗ್ರಾಮಾಂತರ ಘಟಕ–3, ಬೆಳಗಾವಿ 1ನೇ ಘಟಕ, ಹುಬ್ಬಳ್ಳಿ ಗ್ರಾಮಾಂತರ ಘಟಕ–2 ಹಾಗೂ ಮುಧೋಳ ಘಟಕಗಳು ಅನುಕ್ರಮವಾಗಿ ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡುವ ಘಟಕಗಳಾಗಿವೆ.

ಪ್ರತಿ ದಿನ ಅತಿ ಹೆಚ್ಚು ವಹಿವಾಟು ಮಾಡಿದ ನಿರ್ವಾಹಕರಿಗೆ ನಗದು ಪುರಸ್ಕಾರ ಮತ್ತು ಪ್ರಶಂಸಾ ಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಅತಿ ಹೆಚ್ಚು ವಹಿವಾಟು ಮಾಡುವ ವಿಭಾಗ, ಘಟಕ ಹಾಗೂ ನಿರ್ವಾಹಕರನ್ನು ಪ್ರೋತ್ಸಾಹಿಸಲಾಗುವುದು ಹಾಗೂ ಸಾರ್ವಜನಿಕ ಪ್ರಯಾಣಿಕರು ಯುಪಿಐ ಪಾವತಿ ಮೂಲಕ ಟಿಕೆಟ್‌ ಪಡೆಯುವ ಸದರಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT