ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ | ಚನ್ನಮ್ಮ, ರಾಯಣ್ಣ ವಿರುದ್ಧ ಹೇಳಿಕೆ: ಕ್ರಮಕ್ಕೆ ಆಗ್ರಹ

Published 22 ಆಗಸ್ಟ್ 2023, 14:00 IST
Last Updated 22 ಆಗಸ್ಟ್ 2023, 14:00 IST
ಅಕ್ಷರ ಗಾತ್ರ

ಬೈಲಹೊಂಗಲ: ಕಿತ್ತೂರ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಬೆಳಗಾವಿಯ ಗೌರಂಗ್‌ ಗೆಂಜೆ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಈ ಕುರಿತು ಶಿರಸ್ತೇದಾರ್‌ ಎಸ್.ಅರ್. ಗೌಡರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ  ಹೋರಾಡಿದ ಮಹನೀಯರ ಬಗ್ಗೆ ಅವಹೇಳನ ಸಲ್ಲ. ಇಂತಹ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಕನ್ನಡ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಅರ್ಭಾಜ ಮುಲ್ಲಾ, ಸಲೀಂ ಜಾಮಿನದಾರ, ಶಕೀಬ ಬಹದ್ದೂರ ಶಾಯಿ, ಈರಣ್ಣ ಇಂಚಲ, ಸೊಹೈಲ ಪಾಟೀಲ, ಜುನೇದ ಕಡಬಿ, ಸಲ್ಮಾನ ಮನಿಯಾರ, ಉಮ್ಮರ ಹುಬ್ಬಳ್ಳಿ, ಪ್ರದೀಪ ತಟ್ಟಿಮನಿ, ಪ್ರಜ್ವಲ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT