ಭಾನುವಾರ, ಜೂನ್ 13, 2021
25 °C

ಬೆಳಗಾವಿ: ಕೋವಿಡ್‌ ಲಸಿಕೆ ಇಲ್ಲವೆಂದು ಯುವಕರನ್ನು ವಾಪಸ್ ಕಳುಹಿಸಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಬಿಮ್ಸ್‌ ಆವರಣದಲ್ಲಿರುವ ಕೋವಿಡ್ ಲಸಿಕೆ ಕೇಂದ್ರದಲ್ಲಿ ಲಸಿಕೆ ಪಡೆಯಲು ಬಂದಿದ್ದವರನ್ನು ಡಾ.ಪ್ರತೀಕ್‌ ಎನ್ನುವವರು ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆಯಿತು.

ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದ ಯುವಕ, ಯುವತಿಯರು ಬೆಳಿಗ್ಗೆಯೇ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ಅವರೊಂದಿಗೆ 2ನೇ ಡೋಸ್ ಪಡೆಯುವುದಕ್ಕಾಗಿ ವೃದ್ಧರು ಕೂಡ ಬಂದಿದ್ದರು. 18 ವರ್ಷದಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವಿಕೆ ಆರಂಭಿಸದ ಕಾರಣಕ್ಕೆ ಕೆಲವರು ಸಿಬ್ಬಂದಿಯನ್ನು ಪ್ರಶ್ನಿಸಿದರು. ಅಲ್ಲಿಗೆ ಬಂದ ಡಾ.ಪ್ರತೀಕ್, ‘ಲಸಿಕೆ ಖಾಲಿಯಾಗಿದೆ. ಎಲ್ಲರೂ ಇಲ್ಲಿಂದ ಹೊರಡಬೇಕು. ಬಂದ ನಂತರ ತಿಳಿಸಲಾಗುವುದು’ ಎಂದು ಪ್ರಕಟಿಸುತ್ತಿದ್ದರು. ಅದನ್ನು ಚಿತ್ರೀಕರಿಸುತ್ತಿದ್ದ ದೃಶ್ಯ ಮಾಧ್ಯಮ ಪ್ರತಿನಿಧಿಗಳ ಮೇಲೆ ಪ್ರತೀಕ್ ಸಿಟ್ಟಾದರು. ‘ಇಲ್ಲಿಂದ ಹೋಗಿ’ ಎಂದು ಗದರಿದರು. ಪ್ರಶ್ನಿಸಿದ್ದಕ್ಕೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಗ್ವಾದ ನಡೆಸಿದರು.

ಯುವಜನರು, ಗಂಟೆಗಟ್ಟಲೆ ಕಾದರೂ ಲಸಿಕೆ ಸಿಗದಿರುವುದಕ್ಕೆ ನಿರಾಸೆಯಿಂದ ತೆರಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು