ಶುಕ್ರವಾರ, ಮೇ 20, 2022
19 °C

ಚಿತ್ತ ಚಾಂಚಲ್ಯಕ್ಕೆ ಸೋಲಬಾರದು: ಡಾ.ಅಲ್ಲಮಪ್ರಭು ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

–––––

ಬಂದ ಯೋನಿಯನರಿದು ಸಲಹೆನ್ನ ತಂದೆ!

ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು;

ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು

ಎನ್ನ ತಂದೆ ಕೂಡಲಸಂಗಮದೇವಾ ಇವ ಮಾಣಿಸು ನಿಮ್ಮ ಧರ್ಮ!

ಎಂಬತ್ನಾಲ್ಕು ಜೀವರಾಶಿಗಳನ್ನು ಸುತ್ತಿ ಬರುವ ಈ ಶರೀರವು; ಅರಿವು, ಆಚಾರದ ಕುರಿತು ಚಿಂತಿಸದೆ ಮನಸ್ಸಿನ ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ತನ್ನ ಗುರಿಯನ್ನೇ ಮರೆತು ಬಿಟ್ಟಿದೆ. ಅದಕ್ಕಾಗಿಯೇ ಬಸವಣ್ಣನವರು ನಾನು ಬಂದ ರೀತಿಯನ್ನಾದರೂ ನೋಡಿ ನನ್ನನ್ನು ಸಲಹು ತಂದೆ ಎಂದು ಈ ವಚನದ ಮೂಲಕ ಬೇಡಿಕೊಂಡಿದ್ದಾರೆ. ಮನಸ್ಸಿನ ಮಾತು ಕೇಳಿ ಗುರಿಯನ್ನು ತಪ್ಪುತ್ತಿದ್ದೇನೆ; ಬುದ್ಧಿಯು ಅದರ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ಮನುಷ್ಯನಿಗೆ ಮನಸ್ಸು ಮತ್ತು ಬುದ್ಧಿ ಬಹಳ ಮುಖ್ಯವಾದವು. ಅವುಗಳನ್ನು ಹಿಡಿತದಲ್ಲಿಟ್ಟುಕೊಂಡವರು ಶ್ರೇಷ್ಠರಾಗುತ್ತಾರೆ. ಭಾಗಶಃ ಜನರು ಇವುಗಳ ಹಿಡಿತದಲ್ಲಿರುವುದರಿಂದ ಭಗವಂತನ ಆರಾಧನೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬಸವಣ್ಣನವರು ಇವುಗಳ ತಪ್ಪುಗಳನ್ನು ಮನ್ನಿಸಿ, ನನ್ನನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು