ಬೆಳಗಾವಿ: ‘ಭಾರತೀಯ ಸಂಸ್ಕತಿಗೆ ರೆಡ್ಡಿ ಸಮಾಜದ ಕೊಡುಗೆ ಬಹಳಷ್ಟಿದೆ. ಎರಡು ಧ್ರುವ ನಕ್ಷತ್ರಗಳಾದ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನನನ್ನು ನೀಡಿದೆ’ ಎಂದು ಯಮಕನಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಸಿ.ಜಿ. ಮಠಪತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಪಾಲಿಕೆ ಸಹಯೋಗದಲ್ಲಿ ಇಲ್ಲಿನ ಸದಾಶಿವನಗರದ ರೆಡ್ಡಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು 4 ಶತಮಾನಗಳ ಕಾಲ ಆಳಿದ ಕೀರ್ತಿ ರೆಡ್ಡಿ ಸಮಾಜಕ್ಕೆ ಸಲ್ಲುತ್ತದೆ. ಇತಿಹಾಸಕಾರರ ಅಭಿಪ್ರಾಯದ ಪ್ರಕಾರ ಮಹಾಯೋಗಿ ವೇಮನ ಅವರ ತಂದೆ-ತಾಯಿ ಮತ್ತು ಅವರ ಕಾಲದ ಬಗ್ಗೆ ಗೊಂದಲಗಳಿವೆ. ಭಾರತೀಯರು ಸಾಕಷ್ಟು ಇತಿಹಾಸಗಳನ್ನು ಸೃಷ್ಟಿ ಮಾಡುತ್ತೇವೆ. ಆದರೆ ಇತಿಹಾಸವನ್ನು ವ್ಯವಸ್ಥಿತವಾಗಿ ಕಾಪಾಡಲು ನಮಗೆ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವೇಮನ ಅವರಿಗೆ ಜೀವನದಲ್ಲಿ ಸಾಕಷ್ಟು ಜಿಗುಪ್ಸೆಗಳು ಉಂಟಾದವು. ಅಂದಿನಿಂದ ಮಹಾಯೋಗಿ ಮನೆಯಿಂದ ಹೊರಬಂದು ಅನೇಕ ರಾಜ್ಯಗಳನ್ನು ಸಂದರ್ಶಿಸುತ್ತಾರೆ. ಜನರ ಅನುಭವ ಸಂಗ್ರಹಿಸಿ ಮಹಾಯೋಗಿ ಆದವರವರು. ಅನುಭವಗಳನ್ನು ಪದ್ಯಗಳ ಮುಖಾಂತರ ಹೇಳಲು ಪ್ರಾರಂಭಿಸಿದರು. ಅವರ ಸಾಹಿತ್ಯ ಪುಸ್ತಕಗಳಲ್ಲಿ ಬರಬೇಕಾದರೆ ಐದು ದಶಕಗಳು ಬೇಕಾದವು. ವೇಮನ ಒಬ್ಬ ಸಂತ ಕವಿ’ ಎಂದರು.

‘ಮನುಷ್ಯನಿಗೆ ಸತ್ಯದ ದರ್ಶನವಾದಾಗ ಎಲ್ಲರಲ್ಲಿ ಒಳ್ಳೆಯ ಮನೋಭಾವಗಳು ಉಂಟಾಗುತ್ತವೆ. ದುರ್ದೈವದಿಂದ ನಮಗೆ ಸತ್ಯದ ದರ್ಶನ ಆಗಲೇ ಇಲ್ಲ. ಸತ್ಯವನ್ನು ತತ್ವಾದರ್ಶಗಳನ್ನು ಸರಳ ಮಾರ್ಗದಿಂದ ಅರಿಯಬಹುದು’ ಎಂದು ತಿಳಿಸಿದರು.

ಬೆಳಗಾವಿ ಉಪವಿಭಾಗಾಧಿಕಾರಿ ಅಶೋಕ ತೆಲಿ, ತಹಶೀಲ್ದಾರ್ ಆರ್.ಕೆ. ಕುಲಕರ್ಣಿ, ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.