ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಟಿಯು 21ನೇ ಘಟಿಕೋತ್ಸವ: 66,141 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Last Updated 10 ಮಾರ್ಚ್ 2022, 7:17 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಟಿಯು ಜ್ಞಾನಸಂಗಮ ಕ್ಯಾಂಪಸ್‌ನಲ್ಲಿ 21ನೇ ಘಟಿಕೋತ್ಸವ ಬುಧವಾರ ನಡೆಯಿತು.

ಇನ್ಫೊಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಬಳಿಕ ಮಾತನಾಡಿದ ಗೋಪಾಲಕೃಷ್ಣನ್, ಈ ಗೌರವ ಡಾಕ್ಟರೇಟ್ ಅನ್ನು ಗೌರವ ಹಾಗೂ ಹೆಮ್ಮೆಯಿಂದ ಸ್ವೀಕರಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಇನ್ಫೊಸಿಸ್ ಸಿಬ್ಬಂದಿ, ಶಿಕ್ಷಕರು ಹಾಗೂ ಕುಟುಂಬವನ್ನು ನೆನೆಯುತ್ತೇನೆ ಎಂದು ಹೇಳಿದರು.

ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದ ಹೈದರಾಬಾದ್‌ನ ಭಾರತ್ ಬಯೊಟೆಕ್ ವ್ಯವಸ್ಥಾಪಕ ‌ನಿರ್ದೇಶಕ ಡಾ.ಕೃಷ್ಣ ಎಲ್ಲಾ ಹಾಗೂ ಬೆಂಗಳೂರಿನ ಐಐಎಸ್‌ಸಿಯ ಪ್ರಾಧ್ಯಾಪಕಿ ಪ್ರೊ.ರೋಹಿಣಿ ಎಂ.ಗೋಡಬೋಲೆ ಗೈರು ಹಾಜರಾಗಿದ್ದರು.

57,498 ಬಿಇ, 902 ಬಿ.ಆರ್ಕ್., 12 ಬಿ.ಪ್ಲಾನ್., 4,362 ಎಂಬಿಎ, 1,387 ಎಂಸಿಎ, 1,292 ಎಂ.ಟೆಕ್., 70 ಎಂ.ಆರ್ಕ್., 33 ಪಿ.ಜಿ. ಡಿಪ್ಲೊಮಾ, 575 ಪಿಎಚ್.ಡಿ,‌ 3 ಇಂಟಿಗ್ರೇಟೆಡ್ ಡುಯೆಲ್ ಡಿಗ್ರಿ ಹಾಗೂ 4 ಎಂ.ಎಸ್ಸಿ. (ಎಂಜಿನಿಯರಿಂಗ್) ಬೈರಿಸರ್ಚ್ ಪದವಿಗಳನ್ನು ಪ್ರದಾನ ಮಾಡಲಾಯಿತು.

ಲೋಕಸಭೆ ಸಭಾಪತಿ ಓಂ ಬಿರ್ಲಾ, ರಾಜ್ಯಪಾಲ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಸಿ‌.ಎನ್. ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಕರಿಸಿದ್ದಪ್ಪ, ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ ಹಾಗೂ ಪ್ರೊ.ಬಿ.ಈ. ರಂಗಸ್ವಾಮಿ, ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT