ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಕಾಶ ಸಿಕ್ಕರೆ ಕೃಷಿ ಸಚಿವೆ ಆಗುವ ಆಸೆಯಿದೆ: ಲಕ್ಷ್ಮಿ ಹೆಬ್ಬಾಳಕರ

ಕೃಷಿ ಪರಿಕರ ವಿತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ
Published : 28 ಆಗಸ್ಟ್ 2024, 15:40 IST
Last Updated : 28 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಹಿರೇಬಾಗೇವಾಡಿ: ‘ಗ್ರಾಮೀಣ ಭಾಗದ ರೈತರಿಗೆ ಅನುಕೂಲಕವಾಗಲೆಂದು ಮುಂಬರುವ ದಿನಗಳಲ್ಲಿ ಸೋಯಾಬಿನ್ ಸಂಸ್ಕರಣ ಘಟಕ ಸ್ಥಾಪನೆ ಮಾಡುವ ಇಚ್ಛೆ ಇದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿನ ಪಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಕೃಷಿ ಇಲಾಖೆ ವತಿಯಿಂದ ವಿವಿಧ ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪರಣೆಗೆ ಚಾಲನೆ ನೀಡಿ, ವಿವಿಧ ಯೋಜನೆಗಳ ಕೃಷಿ ಪರಿಕರಗಳ ವಿತರಣೆ ಮಾಡಿ ಅವರು ಮಾತನಾಡಿದರು.

‘ಜಿಲ್ಲೆಗೆ ಸರ್ಕಾರ ₹50 ಕೋಟಿಯ ಕೃಷಿ ಪರಿಕರಗಳ ಮೇಲೆ ರಿಯಾಯಿತಿ ನೀಡಿದೆ. ರೈತರು ಇದರ ಸದ್ಭಳಕೆ ಮಾಡಿಕೋಳ್ಳಬೇಕು’ ಎಂದರು.

‘ನಾನು ರೈತ ಮನೆತನದಲ್ಲಿ ಹುಟ್ಟಿ, ಬೆಳೆದವಳು. ಮೊದಲಿನಿಂದಲೂ ಮಹಿಳೆಯರಿಗೆ ಮತ್ತು ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇತ್ತು. ಈಗ ಮಹಿಳೆಯರಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಅವಕಾಶ ಸಿಕ್ಕಿದರೆ ಕೃಷಿ ಸಚಿವೆ ಆಗಬೇಕೆನ್ನುವ ಆಸೆ ಇದೆ’ ಎಂದರು.

ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ‘ಪ್ರಸ್ತುತ ರೈತರು ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿಕೊಳ್ಳುವುದು ಅತಿ ವಶ್ಯಕವಾಗಿದೆ’ ಎಂದರು.

ಹಿರೇಬಾಗೇವಾಡಿ ಹಾಗೂ ಉಚಗಾಂವ ಬ್ಲಾಕ್‌ಗೆ ಸಂಬಂಧಿಸಿದ ಎಲ್ಲ ಗ್ರಾಮಗಳ ರೈತರಿಗೆ ಕೃಷಿ ಪರಿಕರ ವಿತರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 1500ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೃಷಿ ಅಧಿಕಾರಿಗಳಾದ ಎಸ್.ಬಿ ಕೊಂಗವಾಡ, ಎಂ.ಎಸ್.ಪಟಗುಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸ್ಮಿತಾ ಪಾಟೀಲ, ಉಪಾಧ್ಯಕ್ಷೆ ಪುಷ್ಪಾವತಿ ನಾಯ್ಕರ್, ಸಿ‌.ಎಸ್.ನಾಯಕ, ಸುರೇಶ ಇಟಗಿ, ಸಿ.ಸಿ.ಪಾಟೀಲ, ಸುರೇಶ ಕಂಬಿ, ನಾಗಪ್ಪ ಬಾಗೇವಾಡಿ, ಸ್ವಾತಿ ಇಟಗಿ, ಫಕೀರಗೌಡ ಪಾಟೀಲ, ಈರಣ್ಣ ಜಪ್ತಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT