ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿತ: ಕಾಪಾಡಿ ಎಂದು ಗೃಹಸಚಿವರ ಕಾಲಿಗೆ ಬಿದ್ದ ಅಜ್ಜಿ

Published 11 ಡಿಸೆಂಬರ್ 2023, 9:43 IST
Last Updated 11 ಡಿಸೆಂಬರ್ 2023, 9:43 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮಹಿಳೆಯನ್ನು ಬೆತ್ತಲೆಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹೊಡೆದಿದ್ದ ಸ್ಥಳ ಪರಿಶೀಲಿಸಿದರು. ಈ ವೇಳೆ ಸಚಿವರ ಕಾಲಿಗೆ ಬಿದ್ದ ಯುವಕನ ಅಜ್ಜಿ ‘ನಮಗೇನೂ ಗೊತ್ತಿಲ್ಲ, ನಮ್ಮನ್ನು ಕಾಪಾಡಿ’ ಎಂದು ಕಾಲಿಗೆ ಬಿದ್ದು ಬೇಡಿಕೊಂಡರು.

ಗ್ರಾಮದ ಯುವಕ ಯುವತಿಯರಿಬ್ಬರು ಪ್ರೀತಿಸಿ, ಭಾನುವಾರ ರಾತ್ರಿ ಓಡಿ ಹೋಗಿದ್ದಾರೆ. ಸಿಟ್ಟಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದರು. ಈ ಹಿನ್ನೆಲೆಯಲ್ಲಿ ಊರಿಗೆ ಬಂದ ಡಾ.ಪರಮೇಶ್ವರ, ಮಹಿಳೆಯ ಮನೆಗೆ ಆದ ಹಾಗೂ ಹಲ್ಲೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದರು. ಮನೆಯ ಮುಂದೆ ಕಣ್ಣೀರು ಹಾಕುತ್ತ ಕುಳಿತಿದ್ದ ಯುವಕನ ಅಜ್ಜಿಗೆ ಸಮಾಧಾನ ಹೇಳಿದರು.

ಸಚಿವರ ಮುಂದೆ ಗೋಳು ತೋಡಿಕೊಂಡ ಅಜ್ಜಿ, ‘ನಮಗೆ ಈ ವಿಷಯ ಏನೂ ಗೊತ್ತಿಲ್ಲಪ್ಪ. ಮೊಮ್ಮಗ ನಿನ್ನೆ ಮನೆಯಲ್ಲೇ ಮಲಗಿದ್ದ. ಯಾವಾಗ ಆ ಹುಡುಗಿ ಕರೆದಳೋ ಯಾವಾಗ ಹೋದನೋ ಗೊತ್ತಿಲ್ಲ. ಆಕೆಯ ಮನೆಯವರು ಬಂದು ಏಕಾಏಕಿ ಹೊಡೆಯಲು ಶುರು ಮಾಡಿದರು. ನಮಗೆ ಜೀವ ಭಯ ಉಂಟಾಗಿದೆ. ನಮ್ಮನ್ನು ಕಾಪಾಡಿ ತಂದೆ’ ಎನ್ನುತ್ತ ಅಜ್ಜಿ ಪರಮೇಶ್ವರ ಅವರ ಕಾಲಿಗೆ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT