ಬುಧವಾರ, ಸೆಪ್ಟೆಂಬರ್ 30, 2020
23 °C

ಬೆಳಗಾವಿ: ಝುಂಜರವಾಡ– ಜಮಖಂಡಿ ರಸ್ತೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ, ತಾಲ್ಲೂಕಿನ ಝುಂಜರವಾಡ ಹಾಗೂ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಶುಕ್ರವಾರ ಜಲಾವೃತವಾಗಿದೆ.

ನದಿಯ ಹಿನ್ನೀರಿನಿಂದ ಝುಂಜರವಾಡ–ತುಬಚಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅವಳಿ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ.

ತುಬಚಿ– ಝುಂಜರವಾಡ ಗ್ರಾಮಗಳಿಗೆ ಒಂದು ಕಿ.ಮೀ. ಬದಲಿಗೆ 10 ಕಿಲೋ ಮೀಟರ್ ಸುತ್ತಿಕೊಂಡು ಬರುವ ಅನಿವಾರ್ಯ ಎದುರಾಗಿದೆ.

ಅಥಣಿ– ಝುಂಜರವಾಡ ಮಾರ್ಗವಾಗಿ ಬಾಗಲಕೋಟೆ– ಜಮಖಂಡಿ ಸಂಪರ್ಕಕ್ಕೆ 15 ಕಿ.ಮೀ. ಬದಲಿಗೆ ಈಗ 40 ಕಿಲೋ ಮೀಟರ್‌ ಪ್ರಯಾಣಿಸಬೇಕು. ಸಾವಳಗಿ ಮಾರ್ಗವಾಗಿ ಜಮಖಂಡಿಗೆ ಹೋಗಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು