ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗಾಗಿ ‘ಝೀರೊ ಟ್ರಾಫಿಕ್‌’ ಮಾಡಿಕೊಟ್ಟ ಪೊಲೀಸರು

Last Updated 15 ಡಿಸೆಂಬರ್ 2019, 15:24 IST
ಅಕ್ಷರ ಗಾತ್ರ

ಬೆಳಗಾವಿ: ತೀವ್ರ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆಂದು ಹಸುಗೂಸನ್ನು ಕರೆತರುತ್ತಿದ್ದ ಪೋಷಕರಿದ್ದ ವಾಹನಕ್ಕೆ ಇಲ್ಲಿನ ಪೊಲೀಸರು ‘ಝೀರೊ ಟ್ರಾಫಿಕ್‌’ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.

ಬಾಗಲಕೋಟೆ ಜಿಲ್ಲೆಯ ಮುಧೋಳದ ಮುಬಿನಾ ಯಲಿಗಾರ ಅವರು ತಮ್ಮ 13 ದಿನಗಳ ಮಗುವಿಗೆ ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬರುತ್ತಿದ್ದರು. ಅವರ ವಾಹನ ನಗರ ಪ್ರವೇಶಿಸುತ್ತಿದ್ದಂತೆಯೇ ಸಂಚಾರ, ಮಾರಿಹಾಳ ಮತ್ತು ಮಾಳಮಾರುತಿ ಠಾಣೆ ಪೊಲೀಸರು ಕರಡಿಗುದ್ದಿಯಿಂದ ಕೆಎಲ್‌ಇ ಆಸ್ಪತ್ರೆವರೆಗೂ ಸಂಜೆ 4.20ರಿಂದ 4.45ರವರೆಗೆ ‘ಶೂನ್ಯ ಸಂಚಾರ’ ವ್ಯವಸ್ಥೆ ಮಾಡಿಕೊಟ್ಟರು. ಪೊಲೀಸರ ಸಹಕಾರಕ್ಕಾಗಿ ಮಗುವಿನ ತಾಯಿ ಹಾಗೂ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಮಾರಿಹಾಳ ಮತ್ತು ಮಾಳಮಾರುತಿ ಠಾಣೆಯ ಹಾಗೂ ಸಂಚಾರ ವಿಭಾಗದ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT