ಬೆಳಗಾವಿ: ಯಾವುದೇ ಅನುಮತಿ ಪಡೆಯದೇ ಬಸ್ ನಿಲ್ದಾಣ ನಿರ್ಮಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಬಸ್ ನಿಲ್ದಾಣ ಹಾಗೂ ಅದರ ಸುತ್ತಲೂ ಅನಧಿಕೃತವಾಗಿ ತಲೆ ಎತ್ತಿದ್ದ ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಶುಕ್ರವಾರ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿದರು.

ಕಳೆದ 3 ವರ್ಷಗಳಿಂದ ಈ ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆಗೆ ತೆರವು ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಸಿಬ್ಬಂದಿ, ಬಸ್ ನಿಲ್ದಾಣದ ಸುತ್ತಲೂ ಇದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದರು.

ಖಾಸಗಿ ಬಸ್ ನಿಲ್ದಾಣವು ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ. ಆದ್ದರಿಂದ ಕೂಡಲೇ ತೆರವುಗೊಳಿಸಬೇಕು ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪಾಲಿಕೆಗೆ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ತೆರವುಗೊಳಿಸಲಾಗಿದೆ.

ಒಮ್ಮಿಂದೊಮ್ಮೆಲೆ ಪಾಲಿಕೆ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಆಗಮಿಸಿ ತೆರವು ಗೊಳಿಸಲು ಮುಂದಾಗುತ್ತಿದ್ದಂತೆ ಅಂಗಡಿಕಾರರು ಆಕ್ರೋಶ ವ್ಯಕ್ತಪಡಿಸಿದರು. ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಲು ಮುಂದಾದರು. ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ತೆರವು ಕಾರ್ಯಾಚರಣೆ ಸುಗಮವಾಗಿ ಸಾಗಿತು.

ತೆರವು ಕಾರ್ಯಾಚರಣೆಯಿಂದ ಚಹಾದ ಡಬ್ಬಾ ಅಂಗಡಿಗಳ ಸಾಮಗ್ರಿಗಳು ಅಲ್ಲಿಯೇ ಬಿದ್ದಿದ್ದವು. ಸುಮಾರು ನಾಲ್ಕು ತಾಸುಗಳವರೆಗೆ ತೆರವು ಕಾರ್ಯಾಚರಣೆ ನಡೆಯಿತು. ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದ ನಂತರ ಅವುಗಳ ಮಾಲೀಕರು ಸಾಮಗ್ರಿಗಳನ್ನು ತೆಗೆದುಕೊಂಡರು.

`ಖಾಸಗಿ ಜಾಗೆಯಲ್ಲಿ ಬಸ್ ನಿಲ್ದಾಣ ಇದೆ. ಕಳೆದ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಎಂಟು ದಿನಗಳ ಹಿಂದೆ ಪಾಲಿಕೆಯವರು ನೋಟಿಸ್ ನೀಡಿದ್ದರು. ಆದರೆ, ಗುರುವಾರ (ಜು.11) ಸಂಜೆ ಆಗಮಿಸಿ ಇಂದು ಬೆಳಿಗ್ಗೆ ತೆರವುಗೊಳಿಸುವುದಾಗಿ ಹೇಳಿದರು. ಈ ಬಗ್ಗೆ ನಮ್ಮ ಮಾಲೀಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ' ಎಂದು ಖಾಸಗಿ ಬಸ್ ಸಂಸ್ಥೆಯ ವ್ಯವಸ್ಥಾಪಕ ಎಸ್.ಬಿ.ಚವ್ಹಾಣ `ಪ್ರಜಾವಾಣಿ'ಗೆ ತಿಳಿಸಿದರು.

`ಅನಧಿಕೃತವಾಗಿ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಈ ನಿಲ್ದಾಣದ ಸುತ್ತಲೂ ಡಬ್ಬಾ ಅಂಗಡಿಗಳು ತಲೆ ಎತ್ತಿದ್ದರಿಂದ ನಗರದ ಸೌಂದರ್ಯ ಹಾಳಾಗಿತ್ತು. ಇದಲ್ಲದೇ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಸಹ ದೂರು ನೀಡಿದ್ದರು. ಆದ್ದರಿಂದ ತೆರವುಗೊಳಿಸಲಾಯಿತು' ಎಂದು ಪಾಲಿಕೆಯ ನಗರ ಯೋಜನೆ ಅಧಿಕಾರಿ ಎ.ಎಸ್.ಕಾಂಬಳೆ `ಪ್ರಜಾವಾಣಿ'ಗೆ ತಿಳಿಸಿದರು.

`ಜಾಗೆಯ ಮಾಲೀಕರಿಗೆ 20 ದಿನಗಳ ಹಿಂದೆಯೇ ನೋಟೀಸು ನೀಡಲಾಗಿತ್ತು. ಒಟ್ಟು ಮೂರು ನೋಟೀಸುಗಳನ್ನು ನೀಡಲಾಗಿದೆ. ಆದರೂ ಸಹ ಅವರು ತೆರವುಗೊಳಿಸಿರಲಿಲ್ಲ. ಹಿಂದೆ ನೋಟೀಸು ನೀಡಿದ ಸಂದರ್ಭದಲ್ಲಿ ಖಾಸಗಿ ಬಸ್ ಸಂಸ್ಥೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.