ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಉಚಿತ ಆರೋಗ್ಯ ತಪಾಸಣೆ

Last Updated 1 ಏಪ್ರಿಲ್ 2011, 9:15 IST
ಅಕ್ಷರ ಗಾತ್ರ

ರಾಮದುರ್ಗ: ಪುರಸಭೆಯ ಶೇ.18ರ ನಿಧಿ ಹಾಗೂ  ಎಸ್‌ಎಫ್‌ಸಿ ಯೋಜನೆಯಡಿ ಪಟ್ಟಣ ಪ್ರದೇಶ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದವರ ಉಚಿತ ಆರೋಗ್ಯ ತಪಾಸಣೆ  ಶಿಬಿರ ಗುರುವಾರ ನಡೆಯಿತು. ಪುರಸಭೆಯ ಅಧ್ಯಕ್ಷ ಗೋವಿಂದ ಪತ್ತೇಪೂರ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಶಿಷ್ಟರ ಆರೋಗ್ಯ ತಪಾಸಣೆಗೆ ಪುರಸಭೆಯ ನಿಧಿಯಲ್ಲಿ ಅನುದಾನ ನಿಗದಿ ಪಡಿಸಲಾಗಿದೆ. ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ  ಔಷಧಗಳನ್ನು  ಪುರಸಭೆಯಿಂದಲೇ  ಒದಗಿಸಲಾಗುವುದು ಎಂದು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಎಚ್. ದೊಡಮನಿ  ಮಾತನಾಡಿ, ಸರ್ಕಾರಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಈ ದಿಸೆಯಲ್ಲಿ  ಸಾಕಷ್ಟು ಪ್ರಚಾರ ಆಗಬೇಕು ಎಂದರು.

ಮುಖ್ಯಾಧಿಕಾರಿ ಶಶಿಧರ ಕಾಗವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ನಾಯಕ, ಗೋವಿಂದ ಮೋಡಕ, ಶ್ರೀಧರ ಮುದ್ದಿ, ಈರಪ್ಪ ಮಾದರ, ರಾಜೇಂದ್ರ ಕೊಳದೂರ, ಕರಿಯಮ್ಮ ಬೆಳಗಲಿ, ಡಾ.ಎನ್. ಬಿ.ಬನ್ನಿಗಿಡದ, ಡಾ. ದಂಡಾವತಿಮಠ, ಸಿಬ್ಬಂದಿ ಎಂ. ಪಿ. ನದಾಫ್, ಎಂ. ಎಸ್. ರಿತ್ತಿಭಾಯಿ ಪಾಲ್ಗೊಂಡಿದ್ದರು. ಸುಮಾರು 200ಕ್ಕೂ ಹೆಚ್ಚು ರೋಗಿಗಳು ಈ ಸೌಲಭ್ಯಗನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT