ಶನಿವಾರ, ಮಾರ್ಚ್ 25, 2023
27 °C

200 ಜನರ ಹೃದಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಉಚಿತ ಶಿಬಿರದಲ್ಲಿ 200 ಜನರ ಹೃದಯದ ತಪಾಸಣೆ ಮಾಡಿಸಿಕೊಂಡರು.

19 ವಯಸ್ಕರು, ನಾಲ್ವರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಲಹೆ ಮಾಡಿದರು. ಇದಕ್ಕೂ ಮುನ್ನ ಶಿಬಿರಕ್ಕೆ ಚಾಲನೆ ನೀಡಿದ ಡಾ. ಎಸ್‌. ರಿಚರ್ಡ್ಸ್‌, ’ಧೂಮಪಾನ, ಮದ್ಯಪಾನ, ಆನುವಂಶೀಯತೆಯಿಂದ ಹೃದಯ, ಮಧುಮೇಹ ಕಾಯಿಲೆಗಳು ಬರುತ್ತವೆ. ಈ ಚಟಗಳಿಂದ ದೂರವಿರಬೇಕು. ನಿತ್ಯ ವ್ಯಾಯಾಮ ಮಾಡಿದರೆ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು‘ ಎಂದು ಹೇಳಿದರು.

’ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಹುಟ್ಟಿದ ಮಕ್ಕಳಲ್ಲಿಯೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದೇ ಶಿಬಿರದಲ್ಲಿ ಮೂರು ವರ್ಷಕ್ಕಿಂತ ಅನೇಕ ಮಕ್ಕಳು ಬಂದಿದ್ದಾರೆ‘ ಎಂದರು.

ವೈದ್ಯರಾದ ಮಧುಸೂದನ್‌, ಎಂ.ವಿ. ಜಾಲಿ, ನಿಶಿತ್‌, ಪ್ರಸಾದ್‌, ರೋಟರಿ ಕ್ಲಬ್‌ ಅಧ್ಯಕ್ಷ ಡಾ.ಪಿ. ಮುನಿವಾಸುದೇವ ರೆಡ್ಡಿ, ಕಾರ್ಯದರ್ಶಿ ಕೆ.ಎಸ್‌. ಕೃಷ್ಣಮೂರ್ತಿ, ಸಂಯೋಜಕ ಈಶ್ವರ, ಶಿಬಿರದ ಅಧ್ಯಕ್ಷ ಕೆ. ದೀಪಕ್‌ ಕುಮಾರ ಇದ್ದರು. ರೋಟರಿ ಕ್ಲಬ್‌ ಹಾಗೂ ಕೆ.ಎಲ್‌.ಇ. ಸಂಸ್ಥೆ ಸಹಭಾಗಿತ್ವದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು