ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಬಳ್ಳಾರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ; ವಿನೋದ ಕರಣಂ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ‌ ಅಧ್ಯಕ್ಷ ಸ್ಥಾನಕ್ಕೆ ಮೊಟ್ಟ ಮೊದಲ ಮಹಿಳಾ ಅಭ್ಯರ್ಥಿಯಾಗಿ ವಿನೋದ ಕರಣಂ  ಅವರು ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು. 

ನಂತರ ಮಾತನಾಡಿ, ' ಪರಿಷತ್ತಿನ ಪ್ರತಿಯೊಬ್ಬ ಸದಸ್ಯರೂ ಮತ ನೀಡಿ ಬಹುಮತದಿಂದ ಗೆಲ್ಲುಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

'80 ವರ್ಷಗಳಿಂದ ಒಬ್ಬ ಮಹಿಳೆಗೂ ಅಧ್ಯಕ್ಷರಾಗಲು ಅವಕಾಶ ದೊರಕಿಲ್ಲ, ಈಗ ಮೊದಲ ಬಾರಿಗೆ ಮಹಿಳೆಯರಿಗೆ ಕನ್ನಡ ಮಾತೆಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು' ಎಂದು ಮನವಿ ಮಾಡಿದರು.

 ಶ್ರೀ ಕನಕ ದುರಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ತಾಲೂಕು ಕಚೇರಿಗೆ ಬಂದ ಅವರು ಸಹಾಯಕ ಚುನಾವಣಾ ಅಧಿಕಾರಿ ಶಿವಲಿಂಗರೆಡ್ಡಿ ರವರಿಗೆ ನಾಮ ಪತ್ರ ಸಲ್ಲಿಸಿದರು.

ಸಿಎಂ.ಗಂಗಾಧರಯ್ಯ, ಸುಮಾರೆಡ್ಡಿ, ಪದ್ಮಾವತಿ, ಶೈಲಾ ಸುರೇಶ್, ಅಲುವೇಲು, ಕಮಲ ಬಸವರಾಜ್, ಭಾಗ್ಯಲಕ್ಷ್ಮಿ, ವಿದ್ಯಾ ರಾಮಚಂದ್ರ ರಾವ್, ಸಿಎಂ.ಪೂರ್ಣಿಮಾ, ವಿ.ಬಾಬು, ಬಸವರಾಜ್ ಬಳೆ, ರಾಮಪ್ರಸಾದ್, ವೈದ್ಯನಾಥ, ವಿರುಪಾಕ್ಷಯ್ಯ ಹಿರೇಮಠ, ಕೆ.ವೀರಭದ್ರಗೌಡ, ಜಿಎಸ್.ಮೃತ್ಯುಂಜಯ್ಯ, ಡಾ.ಅರುಣಾ ಕಾಮನೇನಿ, ರಾಮಚಂದ್ರ ರಾವ್ ಇದ್ದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು