ಶನಿವಾರ, ಮೇ 28, 2022
26 °C

ಹೊಸಪೇಟೆ: ವಿಜಯ ವಿಠಲ ಮಾರ್ಗದಲ್ಲಿ ಕಮಾನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಭಾರಿ ವಾಹನಗಳ ಸಂಚಾರ ತಡೆಗೆ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಲೋಹದ ಕಮಾನು ಮಾಡಿದೆ.

ವಿಠಲ ದೇಗುಲ ಮಾರ್ಗದಲ್ಲಿ ಹರೇ ಶಂಕರ ಮಂಟಪ ಬರುತ್ತದೆ. ಬಸ್‌ ಸೇರಿದಂತೆ ಇತರೆ ದೊಡ್ಡ ವಾಹನಗಳು ಸಂಚರಿಸಿದಾಗ ಮಂಟಪಕ್ಕೆ ಧಕ್ಕೆಯಾಗುತ್ತಿತ್ತು. ಇತ್ತೀಚೆಗೆ ಬಸ್ಸೊಂದು ಮಂಟಪದಲ್ಲಿ ಸಿಲುಕಿಕೊಂಡು ಅದಕ್ಕೆ ಧಕ್ಕೆಯಾಗಿತ್ತು. ಪದೇ ಪದೇ ಈ ರೀತಿಯ ಘಟನೆ ಆಗುತ್ತಿದ್ದು, ಅದನ್ನು ತಡೆಯಲು ಮಂಟಪಕ್ಕೂ ಮೊದಲು ಕಮಾನು ಮಾಡಿಸಿದೆ. ಈಗ ದೊಡ್ಡ ವಾಹನಗಳ ಸಂಚಾರಕ್ಕೆ ತಡೆ ಬಿದ್ದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು