ಸೋಮವಾರ, ಜನವರಿ 25, 2021
17 °C

ಶಾಂತಿಯುತ ‘ಬಳ್ಳಾರಿ ಬಂದ್‌’; ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಹೋರಾಟ ಸಮಿತಿಯು ಕರೆ ನೀಡಿದ್ದ ಗುರುವಾರದ ‘ಬಳ್ಳಾರಿ ಬಂದ್‌’ ನಗರದಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇತರೆ ತಾಲ್ಲೂಕುಗಳಲ್ಲಿ ಬೆಂಬಲ ದೊರಕಲಿಲ್ಲ.

ಬೆಂಗಳೂರು ರಸ್ತೆ, ತೇರು ಬಜಾರು, ಕಪ್ಪಗಲ್ಲು ರಸ್ತೆ, ಗಾಂಧಿನಗರ ಸೇರಿದಂತೆ ವಿವಿಧೆಡೆ ಅಂಗಡಿಗಳು ಮಧ್ಯಾಹ್ನದವರೆಗೂ ಮುಚ್ಚಿದ್ದವು. ಹಣ್ಣು, ತರಕಾರಿ ಮಾರಾಟಕ್ಕೆ, ವಾಹನಗಳ ಸಂಚಾರಕ್ಕೆ ಬೆಳಿಗ್ಗೆಯಿಂದಲೂ ತಡೆ ಇರಲಿಲ್ಲ. ಆದರೆ ಮಳೆಯ ಕಾರಣದಿಂದಾಗಿ ಜನ ಹೊರಗೆ ಬಾರದೆ ತೆರೆದ ಅಂಗಡಿಗಳಲ್ಲಿ ವರ್ತಕರು ಗ್ರಾಹಕರಿಗಾಗಿ ಕಾಯುತ್ತಿದ್ದರು. 

ಸರ್ಕಾರಿ ಕಚೇರಿಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ನಗರದ ವಿವಿಧೆಡೆ ಬೈಕ್‌ ಜಾಥಾ ನಡೆದರೂ, ಪ್ರತಿಭಟನೆಯು ನಗರದ ಗಡಿಗಿ ಚೆನ್ನಪ್ಪ ವೃತ್ತಕ್ಕಷ್ಟೇ ಸೀಮಿತವಾಗಿತ್ತು.

ದೊರಕದ ಬೆಂಬಲ: ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಬಹುದಾದ ಪಶ್ಚಿಮ ತಾಲ್ಲೂಕುಗಳು ವಿಭಜನೆಯ ಪರವಾಗಿ ಇರುವುದರಿಂದ ಆ ಭಾಗದಲ್ಲಿ ಎಂದಿನಂತೆ ಜನಜೀವನ ನಡೆದಿತ್ತು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು