ಸೋಮವಾರ, ನವೆಂಬರ್ 29, 2021
20 °C
ನ್ಯಾಷನಲ್‌ ಬೈಕ್‌ ರೇಸ್‌ ಚಾಂಪಿಯನ್‌ಷಿಪ್‌

ಶಿವಮೊಗ್ಗದ ರಾಜೇಂದ್ರಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹೊಸ ಹಂಪಿ ಹೊರವಲಯದಲ್ಲಿ ಭಾನುವಾರ ನಡೆದ ‘ಉತ್ಸವ್‌ ದಿ ಹಂಪಿ’ ರಾಷ್ಟ್ರೀಯ ಬೈಕ್‌ ರೇಸ್‌ ಚಾಂಪಿಯನ್‌ಷಿಪ್‌ನಲ್ಲಿ ಶಿವಮೊಗ್ಗದ ರಾಜೇಂದ್ರ ಅವರು ಅತ್ಯುತ್ತಮ ಸಾಧನೆ ತೋರಿ ಸಮಗ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೇರಳದ ಸ್ಯಾಮುವೆಲ್‌ ಜಾಕೋಬ್‌ ಎರಡನೇ ಮತ್ತು ಮೈಸೂರಿನ ಅಬ್ದುಲ್‌ ವಾಹೀದ್‌ ತನ್ವೀರ್‌ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಒಂಬತ್ತು ಜನ ಯುವತಿಯರು ಸೇರಿದಂತೆ ದೇಶದ ನಾನಾ ಭಾಗಗಳ 84 ಬೈಕ್‌ ರೇಸರ್ ಗಳು ಪಾಲ್ಗೊಂಡಿದ್ದರು. ಪ್ರವಾಸೋದ್ಯಮ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಎಂಆರ್‌ಎಫ್‌ ಮತ್ತು ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ವಿಜಯನಗರ ಹಂಪಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು