ಶುಕ್ರವಾರ, ಮಾರ್ಚ್ 5, 2021
30 °C

ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ: ಜ.11ಕ್ಕೆ 52 ನಿವೇಶನಗಳ ಹರಾಜು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ‌ ಜನತೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ‌ ಸಿಹಿ‌ ಸುದ್ದಿ‌ ನೀಡಲು ಸಿದ್ಧತೆಗಳನ್ನು ನಡೆಸಿದೆ.

ನಗರದ ವಿವಿಧೆಡೆ ಮಾರಾಟವಾಗದೇ ಇರುವ ಖಾಲಿ ನಿವೇಶನಗಳನ್ನು ಬಹಿರಂಗವಾಗಿ ಹರಾಜು ಹಾಕಲು ಪ್ರಾಧಿಕಾರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಧೀರ್ಘ ಚರ್ಚೆ ನಡೆಯಿತು.

ರಾಘವೇಂದ್ರ ಕಾಲೋನಿ 2ನೇ ಹಂತದಲ್ಲಿ 26, ಕನಕ ದುರ್ಗಮ್ಮ ಬಡಾವಣೆ , ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 7 ವಸತಿ ನಿವೇಶನ ಹಾಗೂ  1 ವಾಣಿಜ್ಯ ನಿವೇಶನ, ಡಾ.ಸರ್.ಎಂ.ವಿ. ಲಾರಿ ತಂಗುದಾಣದಲ್ಲಿ 11  ವಾಣಿಜ್ಯ ನಿವೇಶನಗಳು, ಕುವೆಂಪುನಗರದಲ್ಲಿ 3 ವಸತಿ ನಿವೇಶನಗಳು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ನಿವೇಶನಗಳ ಮಾರಾಟ ನಡೆಯಲಿದೆ ಎಂದು ಶೇಖರ ತಿಳಿಸಿದ್ದಾರೆ.

ಬಿ‌.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ,  ವಸತಿ ಬಡಾವಣೆಯನ್ನು ನಿರ್ಮಿಸಲು ಇ-ಟೆಂಡರ್ ಕರೆಯಲು ನಿರ್ಧರಿಸಲಾಯಿತು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ 20 ಜಾಹೀರಾತು ಫಲಕಗಳನ್ನು ತಲಾ ₹10 ಲಕ್ಷದಲ್ಲಿ  ನಿರ್ಮಿಸಲು ಸಭೆ ಅನುಮೋದನೆ ನೀಡಿತು.

ಶಾಸಕ ಜಿ.ಸೋಮಶೇಖರ್ ರೆಡ್ಡಿ,  ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ,  ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್ ಸಭೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು