ಶನಿವಾರ, ಸೆಪ್ಟೆಂಬರ್ 25, 2021
29 °C

ಸಂಭ್ರಮದಿಂದ ಕಾರ್‌ ಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕಾರ್‌ ಹುಣ್ಣಿಮೆಯನ್ನು ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಎತ್ತು ಹಾಗೂ ಚಕ್ಕಡಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಅದಕ್ಕೆ ಪೂಜೆ ನೆರವೇರಿಸಿ ಮೆರವಣಿಗೆ ಮಾಡಿದರು. ಇಲ್ಲಿನ ಎತ್ತಿನ ಬಂಡಿ ಯುವಕರ ಸಂಘವು ಸೋಮವಾರ ಸಂಜೆ ನಗರದಲ್ಲಿ ಎತ್ತಿನ ಬಂಡಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಎ.ಪಿ.ಎಂ.ಸಿ.ಯಿಂದ ಆರಂಭಗೊಂಡ ಮೆರವಣಿಗೆಯು ವಾಲ್ಮೀಕಿ ವೃತ್ತ, ಏಳುಕೇರಿಗಳ ಮೂಲಕ ಹಾದು ಮಾರುಕಟ್ಟೆ ಬಳಿ ಕೊನೆಗೊಂಡಿತು.

ಯುವಕರು, ವಯಸ್ಕರು ಸಂಭ್ರಮದಿಂದ ಚಕ್ಕಡಿ ಓಡಿಸಿ ಸಂಭ್ರಮಿಸಿದರು. ಚಿಣ್ಣರು ಬಲೂನ್‌ಗಳನ್ನು ಹಿಡಿದುಕೊಂಡು ಚಕ್ಕಡಿಯಲ್ಲಿ ಕುಳಿತಿದ್ದರು. ಚಕ್ಕಡಿಗಳು ಸಾಲಾಗಿ ಹೋಗುತ್ತಿರುವುದನ್ನು ನೋಡಿ ಸಾರ್ವಜನಿಕರು ಮೊಬೈಲ್‌ಗಳಲ್ಲಿ ಚಿತ್ರ ಸೆರೆ ಹಿಡಿದರು.

ತಾಲ್ಲೂಕಿನ ಹೊಸೂರು, ಮಲಪನಗುಡಿ, ಬೈಲುವದ್ದಿಗೇರಿ, ಧರ್ಮಸಾಗರ ಸೇರಿದಂತೆ ಹಲವೆಡೆ ಕಾರ್‌ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು