ಚಿಣ್ಣರ ಯೋಗ ತರಬೇತಿ ಶಿಬಿರಕ್ಕೆ ತೆರೆ

ಶುಕ್ರವಾರ, ಮೇ 24, 2019
22 °C

ಚಿಣ್ಣರ ಯೋಗ ತರಬೇತಿ ಶಿಬಿರಕ್ಕೆ ತೆರೆ

Published:
Updated:
Prajavani

ಹೊಸಪೇಟೆ: ಪತಂಜಲಿ ಯೋಗ ಸಮಿತಿಯು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿ ಶಿಬಿರ ಇಲ್ಲಿನ ಗಾಂಧಿ ಕಾಲೊನಿಯಲ್ಲಿ ಸೋಮವಾರ ಕೊನೆಗೊಂಡಿತು.

ಒಂದು ವಾರ ಶಿಬಿರದಲ್ಲಿ ಭಾಗವಹಿಸಿ ಯೋಗ, ಪ್ರಾಣಾಯಾಮ ಕಲಿತ ಚಿಣ್ಣರಿಗೆ ಇದೇ ವೇಳೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ನಿವೇದಿತಾ ಶಾಲೆಯ ಮುಖ್ಯಶಿಕ್ಷಕಿ ಉಮಾ ಮಾತನಾಡಿ, ‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಯೋಗ ಕೂಡ ಒಂದಾಗಿದೆ. ನಿತ್ಯ ಮಕ್ಕಳು ಯೋಗ ಮಾಡುವುದರಿಂದ ಆರೋಗ್ಯವಂತರಾಗಿ ಇರಬಹುದು. ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ಹೇಳಿದರು.

‘ಇಂದಿನ ಆಧುನಿಕ ಜೀವನ ಶೈಲಿಯಿಂದ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಅದರಿಂದ ಹೊರತರಲು ಪೋಷಕರು ಮಕ್ಕಳಿಗೆ ಯೋಗ ಕಲಿಸುವುದು ಒಳಿತು. ಪತಂಜಲಿ ಸಮಿತಿಯು ಎಲ್ಲೆಡೆ ಯೋಗ ಶಿಬಿರಗಳನ್ನು ಹಮ್ಮಿಕೊಂಡು ಅದರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನಾರ್ಹ ಕೆಲಸ’ ಎಂದು ಕೊಂಡಾಡಿದರು. 

ಎಂ.ಎಸ್.ಪಿ.ಎಲ್.ನ ರಮೇಶ, ನಾಗರಿಕ ಹಿತರಕ್ಷಣ ಸೇವಾ ಸಮಿತಿ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಮಹಿಳಾ ಪತಂಜಲಿ ಯೋಗ ಸಮಿತಿಯ ಗೌರಮ್ಮ ಬ್ಯಾಳಿ, ಸಂವಾದ ಪ್ರಭಾರಿ ಪಿ.ಆರ್.ಕುಲಕರ್ಣಿ, ಕಿಸಾನ್‌ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ, ಭಾರತ ಸ್ವಾಭಿಮಾನ ಟ್ರಸ್ಟ್‌ ಕಾರ್ಯದರ್ಶಿ ಪೂಜಾ ಐಲಿ, ಸಮಿತಿಯ ತಾಲ್ಲೂಕು ಪ್ರಭಾರಿ  ಎಂ. ಶಿವಮೂರ್ತಿ, ನಾಗಮಣಿ, ಮಧುಸೂದನ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !