ಸೋಮವಾರ, ಆಗಸ್ಟ್ 2, 2021
21 °C

ಕೂಡ್ಲಿಗಿ ಪ. ಪಂಚಾಯ್ತಿ ಉಪಚುನಾವಣೆ: ಕಾಂಗ್ರೆಸ್, ಜೆಡಿಎಎಸ್‌ಗೆ ತಲಾ ಒಂದು ಸ್ಥಾನ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಇಲ್ಲಿನ ಪಟ್ಟಣ ಪಂಚಾಯ್ತಿಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಪಟ್ಟಣ ಪಂಚಾಯ್ತಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ತೀವ್ರ ಮುಖ ಭಂಗವಾಗಿದೆ.
 
1ನೇ ವಾರ್ಡಿನಲ್ಲಿ ಕಾಂಗ್ರೆಸ್‌ನ ಕೆ. ಲೀಲಾವತಿ ಪ್ರಭಾಕರ್ 237 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, 12ನೇ ವಾರ್ಡಿನಲ್ಲಿ ಜೆಡಿಎಸ್ ನ ಬಡಬೀಮಯ್ಯನವರ ಸರಸ್ವತಿ 457 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ತನ್ನ ಬಲವನ್ನು7ಕ್ಕೆ ಹೆಚ್ಚಿಸಿಕೊಂಡರೆ, ಜೆಡಿಎಸ್ ಬಲ 5ಕ್ಕೆ ಏರಿಕೆಯಾಗಿದೆ. ಬಿಜೆಪಿ 6 ಸದಸ್ಯರನ್ನು ಹೊಂದಿದ್ದು, ಒಬ್ಬರು ಪಕ್ಷತೇರ ಸದಸ್ಯರಿದ್ದಾರೆ.

1ನೇ ವಾರ್ಡಿನಲ್ಲಿ ಕಾಂಗ್ರೆಸ್ ನ ಕೆ. ಲೀಲಾವತಿ ಪ್ರಭಾಕರ್-237, ಜೆಡಿ ಎಸ್ ನ ಬಿ. ನಾಗರಾಜ- 167, ಬಿಜೆಪಿಯ ಎಂ.ವಿ. ಪ್ರಕಾಶ ನಾಯ್ಕ್ -186 ಮತ ಪಡೆದಿದ್ದು, 2 ಮತಗಳು ನೋಟಕ್ಕೆ ಬಿದ್ದಿವೆ. 

12ನೇ ವಾರ್ಡಿನಲ್ಲಿ ಜೆಡಿಎಸ್  ಬಡಬೀಮಯ್ಯನವರ ಸರಸ್ವತಿ- 457,  ಬಿಜೆಪಿಯ ಮಲ್ಲಮ್ಮ ಸೋಮಯ್ಯನವರ ನಾಗರಾಜ- 251, ಕಾಂಗ್ರೇಸ್ ನ ಮಾಳಿಗಿ ರೂಪ ಮಂಜುನಾಥ-241, ಪಕ್ಷೇತರ ಅಭ್ಯರ್ಥಿ ಕೆ. ವಾಣಿ ರಮೇಶ-39 ಪಡೆದಿದ್ದು, 4 ಮತಗಳು ನೋಟಕ್ಕೆ ಚಲಾವಣೆಯಾಗಿವೆ.
 
ಪಟ್ಟಣ ಪಂಚಾಯ್ತಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಗಳನ್ನು ಹೊಂದಿ, ಆಡಳಿತ ನಡೆಸುತ್ತಿರುವ ಬಿಜೆಪಿಗೆ ಒಂದೂ ಸ್ಥಾನ ಸಿಗದೆ ತೀವ್ರ ಮುಖ ಭಂಗ ಅನುಭವಿಸಿದೆ.

ಚುನಾವಣಾಧಿಕಾರಿ ವಾಮದೇವ ಕೊಳಿ, ಸಹಾಯಕ ಚುನಾವಣಾಧಿಕಾರಿ ನೀಲಕಂಠಾಚಾರಿ ನೇತೃತ್ವದಲ್ಲಿ ಸೋಮವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕೈಗೊಳ್ಳಲಾಗಿತ್ತು. ಎಸ್.ವಿ ಸಿದ್ದಾರಾಧ್ಯ,  ಬಿ. ನಾಗರಾಜ, ಮಹಮದ್ ಸಲೀಮ್ ಮತ ಎಣಿಕೆ ನಡೆಸಿದರು. ಸಿಪಿಐ ವಸಂತ ಅಸೋದೆ ನೇತೃತ್ವದಲ್ಲಿ ಮತ ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ವಿಜಯೋತ್ಸವ: ಮತ ಎಣಿಕೆ ಕಾರ್ಯ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎರಡು ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ವಾರ್ಡುಗಳಲ್ಲಿ ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು