ಹೊಸಪೇಟೆ: ಐದು ದಿನಗಳ ನಂತರ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ತಗ್ಗಿದೆ. ಮಂಗಳವಾರದಿಂದ (ಜು.7ರಿಂದ) ಸತತವಾಗಿ ಒಳಹರಿವು ಹೆಚ್ಚಾಗುತ್ತಲೇ ಇತ್ತು. ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದರಿಂದ ಒಳಹರಿವು ಇಳಿಮುಖಗೊಂಡಿದೆ.

ಭಾನುವಾರ 24,497 ಕ್ಯುಸೆಕ್ ಒಳಹರಿವು ದಾಖಲಾಗಿದೆ. 298 ಕ್ಯುಸೆಕ್ ಹೊರಹರಿವು ಇದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,600.55 ಅಡಿ ನೀರಿನ ಸಂಗ್ರಹವಿದೆ.

ಶನಿವಾರ 34,374 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಶುಕ್ರವಾರ 26,007 ಕ್ಯುಸೆಕ್, ಗುರುವಾರ 16,211 ಕ್ಯುಸೆಕ್, ಬುಧವಾರ 7,321 ಕ್ಯುಸೆಕ್ ಹಾಗೂ ಮಂಗಳವಾರ 2,532 ಕ್ಯುಸೆಕ್ ಒಳಹರಿವು ದಾಖಲಾಗಿತ್ತು.

‘ಜಲಾಶಯದ ಮೇಲ್ಭಾಗದಲ್ಲಿ ಮಳೆ ಕಡಿಮೆಯಾಗಿದೆ. ತುಂಗಾ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ತಗ್ಗಿದೆ. ಇದು ಒಳಹರಿವು ತಗ್ಗಲು ಪ್ರಮುಖ ಕಾರಣ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.