ಭಾನುವಾರ, ಜೂನ್ 13, 2021
21 °C

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಫೇಸ್‌ಬುಕ್‌ನಲ್ಲಿ ಒಂದು ಜಾತಿ ವಿರುದ್ಧ ಅವಹೇಳನಕಾರಿಯಾಗಿ ಬರೆದು ಪೊಸ್ಟ್ ಮಾಡಿದ್ದ ಯುವಕನ ವಿರುದ್ದ ಗುಡೇಕೋಟೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ಅತನನ್ನು ಬಂಧಿಸಿದ್ದಾರೆ.

ಸಂಡೂರು ತಾಲ್ಲೂಕಿನ ಸೋವೇನಹಳ್ಳಿಯ ನಿವಾಸಿ ಮಹೇಶ ಬಂಧಿತ ಆರೋಪಿ. ಆತ ಶುಕ್ರವಾರ ಬೆಳಿಗ್ಗೆ ಪೋಸ್ಟ್ ಹಾಕಿದ್ದ,  ಇದನ್ನು ಗಮನಿಸಿದ ಕೂಡ್ಲಿಗಿ ಡಿವೈಎಸ್ಪಿ ಜಿ. ಹರೀಶ್ ರೆಡ್ಡಿ ತಕ್ಷಣ ಆರೋಪಿಯನ್ನು ಪತ್ತೆ ಹಚ್ಚುವಂತೆ ಗುಡೇಕೋಟೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರಿಂದ ಗುಡೇಕೋಟೆ ಪಿಎಸ್‍ಐ ಶಂಕರ್ ನಾಯ್ಕ್ ಹಾಗೂ ಸಿಬ್ಬಂದಿ ಸೋವೇನಹಳ್ಳಿಯಲ್ಲಿ ಮಹೇಶನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾತಿ ನಿಂದನೆ ಹಾಗೂ ಜಾತಿ ಜಾತಿ ಮಧ್ಯ ಪರಸ್ಪರ ದ್ವೇಷ ಹರಡಿದ ಆರೋಪದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಕೂಡ್ಲಿಗಿ ಡಿವೈಎಸ್ಪಿ ಜಿ. ಹರೀಶ್ ರೆಡ್ಡಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.